ಯುವಕ- ಯುವತಿ ನೇಣು ಬಿಗಿದು ಆತ್ಮಹತ್ಯೆ

sucide
Published on

ಸುಳ್ಯ/ಈಶ್ವರಮಂಗಲ: ನಗರದ ವಸತಿಗೃವೊಂದರಲ್ಲಿ ಯುವ ಜೋಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದೆ.

ತಾಲೂಕಿನ ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್(21) ಹಾಗೂ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಳಿಯ ನಾರ್ಯದ ಕಲ್ಕಾಜೆಯ ಶೇಷಪ್ಪ ಎಂಬವರ ಪುತ್ರಿ ಇಂದಿರಾ(19) ಮೃತರು.

ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ದರ್ಶನ್ ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಇಂದಿರಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ತಾನು ಕೆಲಸ ಮಾಡುತ್ತಿದ್ದ ಹೋಟೆಲ್ ಪಕ್ಕದಲ್ಲೇ ಇರುವ ವಸತಿಗೃಹಕ್ಕೆ ದರ್ಶನ್ ಭಾನುವಾರ ಸಂಜೆ ಯುವತಿಯೊಂದಿಗೆ ಬಂದು ಕೊಠಡಿ ಪಡೆದಿದ್ದರು. ಸೋಮವಾರ ಬೆಳಗ್ಗೆ ವಸತಿಗೃಹದಿಂದ ಹೊರ ಹೋಗಿದ್ದ ಅವರಿಬ್ಬರು ಮರಳಿ ಬಂದಿದ್ದರು. ಬಳಿಕ ಕೊಠಡಿ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಂಶಯಗೊಂಡ ವಸತಿ ಗೃಹದ ಸಿಬ್ಬಂದಿ ಕಿಟಕಿ ಮೂಲಕ ನೋಡಿದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.

ಪ್ರೀತಿಗೆ ವಿರೋಧ ವ್ಯಕ್ತವಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ತಂಗಡಿ ಕಡೆಯ ಯುವತಿಯ ಸಂಬಂಧಿಕರು ಬಂದ ಬಳಿಕವಷ್ಟೇ ವಸತಿಗೃಹದ ಕೃತ್ಯ ಎಸಗಲಾದ ಕೊಠಡಿಯ ಬಾಗಿಲು ತೆರೆದು ಹೆಚ್ಚಿನ ಪರಿಶೀಲನೆ ಮಾಡಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net