

ಬೆಳಗಾವಿ: ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ರಾಜ್ಯ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್‌ನಿಂದ ಈಚೆಗೆ ಜರುಗಿದ ರಾಜ್ಯಮಟ್ಟದ ಸಬ್ ಜೂನಿಯರ್ ಬಾಲಕ ಮತ್ತು ಬಾಲಕಿಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಬಾಕ್ಸಿಂಗ್ ಕ್ರೀಡಾಪಟುಗಳು ಮೂರು ಚಿನ್ನ, ನಾಲ್ಕು ಬೆಳ್ಳಿ, ನಾಲ್ಕು ಕಂಚಿನ ಪದಕ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಬಾಕ್ಸಿಂಗ್‌ನಲ್ಲಿ ಸಾಯಿನಾಥ ಕಾಂಬಳೆ, ಸುಪ್ರೀಮ ಮಸೂತಿ, ನಿರೀಕ್ಷಾ ಪಾಟೀಲ ಚಿನ್ನದ ಪದಕ ಪಡೆದಿದ್ದರೆ, ಹೇಮಂತ ನಾಯಕ್, ಮಹಮದ ಅಲಿ ಬಾಳೆಕುಂದ್ರಿ, ಭೂಮಿಕಾ ಕುರುಬರ, ಗಾಯತ್ರಿ ಹಲಗೆಕರ್ ಬೆಳ್ಳಿ ಪದಕ ಪಡೆದಿದ್ದಾರೆ. ಸಮೀಕ್ಷಾ ಸುತಾರ, ಕರಣ ಕುರುಬರ, ಶಶಾಂಕ್ ನಿಂಬಾಳ್ಕರ, ಕೋಟಿಭಾಸ್ಕರ್ ಜುವೆಕರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಬಾಕ್ಸಿಂಗ್ ಪಟು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಮುಕುಂದ ಕಿಲ್ಲೇಕರ, ರಾಷ್ಟ್ರೀಯ ಬಾಕ್ಸಿಂಗ್ ಪಟು ಮಲ್ಲು ಕರಗುಪ್ಪಿ, ವಿಶಾಲ್ ನಿಂಬಾಳ್ಕರ್, ಮಹೇಶ ಮಸೂತಿ ಹಾಗೂ ಕಾಕತಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಅಕ್ಕಿ ಮಾರ್ಗದರ್ಶನ ನೀಡಿದ್ದರು.