ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳಗಾವಿ ಕ್ರೀಡಾಪಟುಗಳ ಉತ್ತಮ ಸಾಧನೆ

26Jaggu2
ಶಿಕ್ಷಣ ಇಲಾಖೆಯಿಂದ ಬೆಂಗಳೂರಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ 14ರಿಂದ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ಪಡೆದ ಬೆಳಗಾವಿ ಕ್ರೀಡಾಪಟುಗಳು.
Published on

ಬೆಳಗಾವಿ: ಶಿಕ್ಷಣ ಇಲಾಖೆಯಿಂದ ಬೆಂಗಳೂರಿನ ಜಯಪ್ರಕಾಶ ನಾರಾಯಣ ಸ್ಪೋಟ್ಸ್ ಕೇಂದ್ರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ರಾಜ್ಯಮಟ್ಟದ 14ರಿಂದ 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಬೆಳಗಾವಿ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ.

ಸ್ಪರ್ಧೆಯಲ್ಲಿ ಒಟ್ಟು 10 ಚಿನ್ನ, 2 ಬೆಳ್ಳಿ, 10 ಕಂಚಿನ ಪದಕ ಪಡೆದು ಕೀರ್ತಿ ತಂದಿದ್ದಾರೆ. ಬಾಲಕರ ವಿಭಾಗದಲ್ಲಿ ಸಾಯಿನಾಥ ಕಾಂಬಳೆ, ಹೇಮಂತ ನಾಯಕ, ಪ್ರತಾಪ ಶಿವಗೇಕರ, ಪ್ರೀತಂ ಶೆಟ್ಟರ್, ಶಿವಪ್ರಸಾದ ಹಿರೇಮಠ, ನಿರಂಜನಗೌಡ ಪಾಟೀಲ, ಮಿಜಾನ್ ಸೌದಾಗರ ಅವರು ಚಿನ್ನದ ಪದಕ, ಕೇದಾರ ದಂಗಾರ್ಲೆ, ಮಹಮ್ಮದ್ ಅಲಿ, ಕೋಟಿಭಾಸ್ಕರ ಜುವೆಕರ, ಪಾರ್ಥ್ ಚತುರ, ವಿವೇಕ ಕುಣಕಿಕೊಪ್ಪ, ಋತುರಾಜ ಸುಳೇಬಾವುಕರ, ಸುದೀಪ ಮಸೂತಿ, ಶ್ರೇಯಸ್ ಜಾಂಬೋಟಿಕರ ಕಂಚಿನ ಪದಕ ಪಡೆದಿದ್ದಾರೆ.

ಬಾಲಕಿಯರ ವಿಭಾಗದಲ್ಲಿ ಪ್ರಿಯಾ ಶೆಟ್ಟರ್, ಯಶಿಕಾ ಹಿರೇಮಠ, ಶಿವಾನಿ ದುದುಮ್ ಚಿನ್ನದ ಪದಕ , ಸೇಜಲ ಕಂಗಾಳೆ ಬೆಳ್ಳಿ, ಸಾಧನಾ ಅಗಸಿಬಾಗಿಲ, ಪೃಥ್ವಿ ಭಂಗಿ, ಸ್ವಾನಂದಿ ಪಾವಳೆ, ಅಪೂರ್ವ ಕಂದಗಲೆ ಕಂಚಿನ ಪದಕ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಬಾಕ್ಸಿಂಗ್‌ಪಟು ಮುಕುಂದ ಕಿಲ್ಲೇಕರ, ಮಲ್ಲಪ್ಪ ಕರಗುಪ್ಪಿ, ಮಹೇಶ ಅಕ್ಕಿ,

ಎಸ್.ಎಸ್. ಅಂತರಗಟ್ಟಿ, ವಿಶಾಲ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net