ಬಾಕ್ಸ್ ಕ್ರಿಕೆಟ್ ಲೀಗ್ ಫೆ. 4ರಂದು

bcl
Published on

ಹುಬ್ಬಳ್ಳಿ: ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಸ್ಥೆ (ಜಿತೋ)ಯು ಫೆಬ್ರುವರಿ 4ರಂದು ಕೇಶ್ವಾಪುರ ಸ್ಪೋರ್ಟ್ಸ್ ಪಾರ್ಕ್​ನಲ್ಲಿ 5ನೇ ಆವೃತ್ತಿಯ ಬಾಕ್ಸ್ ಕ್ರಿಕೆಟ್ ಲೀಗ್ ಟೂರ್ನಿ ಆಯೋಜಿಸಿದೆ.

ನಾಲ್ಕು ಮಹಿಳಾ ತಂಡಗಳು ಸೇರಿ 20 ತಂಡಗಳು ಸೆಣಸಲಿವೆ. ಆಟಗಾರರ ಹರಾಜು ಪ್ರಕ್ರಿಯೆ ಶುಕ್ರವಾರ ನಡೆಯಿತು. ಒಟ್ಟು 150ಕ್ಕೂ ಹೆಚ್ಚು ಆಟಗಾರರನ್ನು ಆಯ್ಕೆ ಮಾಡಿ ತಂಡಗಳನ್ನು ರಚಿಸಲಾಗಿದೆ.

ಜಿತೋ ಅಧ್ಯಕ್ಷ ಅನಿಲಕುಮಾರ್ ಜೈನ್, ಕಾರ್ಯದರ್ಶಿ ಪ್ರವೀಣ ಚೌಧರಿ, ಮಾಜಿ ಅಧ್ಯಕ್ಷ ಭವರಲಾಲ್ ಜೈನ್, ರಾಜನ್ ಜೈನ್, ಅನ್ಮೋಲ್ ಜೈನ್, ಅಂಕಿತ್ ಸಂಕ್ಲೇಚಾ, ಅಕ್ಷಯ ಬಗ್ರೇಚಾ, ನಮನ ಜೈನ್, ತನಿಷ್ಕ್ ಜೈನ್, ಯಶ್ವಿ ಜೈನ್, ಖುಷಿ ಜೈನ್, ದಿಯಾ ಜೈನ್, ್ತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net