

ಅಥಣಿ: ಅಥಣಿ ಪಟ್ಟಣದ ಹೊರ ವಲಯದಲ್ಲಿರುವ ತಂಗಡಿ-ಸಿನ್ನಾಳ ರಸ್ತೆಯಲ್ಲಿನ ಶ್ರೀಕೃಷ್ಣ ಗೋ ಶಾಲೆಯಲ್ಲಿನ 18 ಗೋವುಗಳಿಗೆ ದಾನಿಗಳು ನೆರವಾಗಿದ್ದಾರೆ.
‘ಗೋ ಶಾಲೆಯಲ್ಲಿ ಮೇವಿಲ್ಲದೆ ಬಳಲುತ್ತಿವೆ ಗೋವು’ ಎಂಬ ಶೀರ್ಷಿಕೆಯಡಿ ಏ. 9ರಂದು ‘ವಿಜಯವಾಣಿ’ಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿ ಹಿನ್ನೆಲೆಯಲ್ಲಿ ಗೋವುಗಳಿಗೆ ಸಾರ್ವಜನಿಕರು, ಉದ್ಯಮಿಗಳು, ಮುಖಂಡರಿಂದ ನೆರವಿನ ಮಹಾಪೂರ ಹರಿದು ಬಂದಿದೆ. ಲಾಕ್‌ಡೌನ್ ಆದೇಶದಿಂದ ಆಹಾರವಿಲ್ಲದೇ ಬಳಲುತ್ತಿದ್ದ ಜಾನುವಾರುಗಳ ರಕ್ಷಣೆಗೆ ಸಹಾಯ ಹಸ್ತ ಚಾಚಿದ್ದಾರೆ. ಉದ್ಯಮಿ ಸಂತೋಷ ಸಾವಡಕರ 2 ಕ್ವಿಂಟಾಲ್ ಹಸಿ ಮೇವು ಖರೀದಿಸಿ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ 2 ಕ್ವಿಂಟಾಲ್ ಹಿಂಡಿ ಮತ್ತು ಹಿಟ್ಟಿನ ಪ್ಯಾಕೆಟ್‌ಗಳನ್ನು ವಿತರಿಸಿದರು. ಗುತ್ತಿಗೆದಾರ ರಾಜು ಆಲಬಾಳ, ಹಿರಿಯ ಮುಖಂಡ ಉಮೇಶರಾವ ಬಂಟೋಡ್ಕರ್ 1 ಟ್ರಾೃಕ್ಟರ್ ಮೇವು ಹಾಗೂ ಹಿಂಡಿ ನೀಡಿದ್ದಾರೆ. ಶೇಖರ ಕೋಲಾರ, ಸೋಮು ವಾಂಗಿ ಕಾಳು ಹಿಂಡಿ ವಿತರಿಸಿದ್ದಾರೆ. ವಿಪ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು 1 ಟ್ರಾೃಕ್ಟರ್ ಮೇವು ಒದಿಗಿಸಿದ್ದಾರೆ. ಇನ್ನು ಹಲವು ದಾನಿಗಳು ಸಹಾಯ ಮಾಡಿದ್ದಾರೆ. ಜಾನುವಾರುಗಳ ಸಮಸ್ಯೆ ಕುರಿತು ಬೆಳಕು ಚೆಲ್ಲಿದ ಪತ್ರಿಕೆ ಕಾರ್ಯಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.