ಶಿಕ್ಷಕರ ಸಂದ ಎಲೆಕ್ಷನಲ್ಲಿ ಭರಪೂರ ಗಿಫ್ಟ್

FotoJet
Published on

ಶ್ರೀನಿವಾಸಪುರ: ಸರ್ಕಾರಿ ನೌಕರರ ಚುನಾವಣೆಯಲ್ಲಿ ಗದ್ದೇ ಗೆಲ್ಲಬೇಕು ಎಂಬ ಜಿದ್ದಿನಲ್ಲಿ ಸ್ಪರ್ಧಾಳುಗಳು ಮತದಾರ ನೌಕರರ ಬೇಡಿಕೆಗಳನ್ನು ಪೂರೈಸಲು ಮುಂದಾಗಿರುವುದು ಸಾರ್ವತ್ರಿಕ ಚುನಾವಣೆ ಗೌಜುಗದ್ದಲವನ್ನೂ ಮೀರಿಸಿದೆಯೇ ಎಂಬ ಅನುಮಾನ ಮೂಡಿಸಿದೆ.

ನೌಕರರ ಸಂದ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿಸಿಕೊಂಡಿರುವ ಕೆಲ ಅಭ್ಯರ್ಥಿಗಳು ಪ್ರತಿ ಮತದಾರರಿಗೆ ಛತ್ರಿ, ಹಾಟ್​ಬಾಕ್ಸ್​ಗಳು, ನೀರಿನ ಬಾಟಲ್​ಒಳಗೊಂಡ ಸಾವಿರಾರು ರೂ. ಮೌಲ್ಯದ ಕಿಟ್​ ಬ್ಯಾಗ್​ಗಳು ಹಾಗೂ ಇತರ ಸಾಮಗ್ರಿಗಳನ್ನು ನೀಡುತ್ತಿದ್ದಾರೆ. ಇದು ಕೆಲ ನೌಕರರ ವಲಯದಲ್ಲಿ ಬೇಸರ ತರಿಸಿದೆ.

ತಾಲೂಕಿನ ರಾಜ್ಯ ಸರ್ಕಾರಿ ನೌಕರರ ಸಂದ ನಿರ್ದೇಶಕರ 32 ಸ್ಥಾನಗಳಿಗೆ ಇಂದು (ಅ.28) ಚುನಾವಣೆ ನಡೆಯಲಿದ್ದು, ವಿವಿಧ ಇಲಾಖೆಗಳಿಂದ 27 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗಕ್ಕೆ 3 ಸ್ಥಾನಗಳು, ಪ್ರೌಢ ಶಾಲಾ ವಿಭಾಗಕ್ಕೆ ಒಂದು ಸ್ಥಾನ, ಬಿಇಒ ಕಚೇರಿ ಒಳಗೊಂಡಂತೆ ಒಟ್ಟು 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ತಾಲೂಕಿನಲ್ಲಿ ಒಟ್ಟು 677 ಮತದಾರರಿದ್ದು, 3 ಸ್ಥಾನಗಳಿಗೆ 3 ಬಣಗಳಾಗಿ 9 ಮಂದಿ ಕಣದಲ್ಲಿದ್ದು ಚುನಾವಣೆ ರಂಗೇರಿದೆ.

ಗೆಲುವಿಗೆ ಕಸರತ್ತು: ಪ್ರಾಥಮಿಕ ಶಾಲಾ ವಿಭಾಗಕ್ಕೆ ಸರ್ಕಾರಿ ನೌಕರರ ಸಂದ ಮಾಜಿ ಅಧ್ಯಕ್ಷ ಬಂಗವಾದಿ ಎಂ.ನಾಗರಾಜ್​ ಅವರ ತಂಡದಲ್ಲಿ ಶ್ವೇತಾ, ಕೆ.ರಾಜಣ್ಣ, ಎಂ. ಮೂರ್ತಿ ಇದ್ದಾರೆ. ಶತಾಯಗತಾಯ ಗೆದ್ದು ನಾಲ್ಕನೇ ಬಾರಿಗೆ ಅಧ್ಯಕ್ಷಗಾದಿ ಗಿಟ್ಟಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದು, ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಹಿಂದಿನ ಅಧ್ಯಕ್ಷ ಗೋವಿಂದರೆಡ್ಡಿ ನಾಯಕತ್ವದಲ್ಲಿ ಸ್ವಾಭಿಮಾನಿ ಶಿಕ್ಷಕರ ಬಳಗ ಎಂದು ಪ್ರಚಲಿತವಾಗಿರುವ ಎಂ. ಬೈರೇಗೌಡ, ಎಂ. ಶಂಕರ್​, ಜಿ.ಎನ್​.ಶ್ರೀನಿವಾಸಯ್ಯ ಕಣದಲ್ಲಿದ್ದಾರೆ.

ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ನೇತೃತ್ವದಲ್ಲಿ ಆನಂದಾಚಾರಿ, ಕಾಳಾಚಾರಿ, ವೇಣುಗೋಪಾಲರೆಡ್ಡಿ ಕಣದಲ್ಲಿ ಇದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಎಸ್​.ಮುನಿವೆಂಕಟಪ್ಪ ಅವರು ಕಣದಲ್ಲಿದ್ದು, ಬೈರೇಗೌಡ ತಂಡ ಇವರನ್ನು ಬೆಂಬಲಿಸಿದೆ. ಪ್ರತಿಸ್ಪರ್ಧಿಯಾಗಿ ಲಕ್ಷಿ$್ಮಪತಿ ಕಣದಲ್ಲಿದ್ದು, ಎಂ. ನಾಗರಾಜ್​ ತಂಡ ಬೆಂಬಲವಾಗಿದೆ. ಬಿಇಒ ಕಚೇರಿ ಅಧೀಕ್ಷಕ ವೈ.ಎನ್​. ಶ್ರೀನಿವಾಸ್​ ಅವರಿಗೆ ವಾಹನ ಚಾಲಕ ಜಕಾಉದ್ದೀನ್​ ಪೈಪೋಟಿಗಿಳಿದಿದ್ದಾರೆ.

ಮತದಾರ ಪಟ್ಟಿಯಲ್ಲಿ ಹೆಸರು ನಾಪತ್ತೆ: ಶಿಕ್ಷಕರ ಸಂದ ನಿರ್ದೇಶಕನಾಗಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ಆದರೆ, ಈಗ ನಡೆಯಲಿರುವ ನೌಕರರ ಸಂ ಮತ್ತು ಶಿಕ್ಷಕರ ಸಂದ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಉದ್ದೇಶಪೂರ್ವಕವಾಗಿ ನಿಕಟಪೂರ್ವ ಅಧ್ಯಕ್ಷರು ಹಾಗೂ ಅವರ ತಂಡ ಸೇರಿಕೊಂಡು ಮತದಾರರ ಪಟ್ಟಿಯಲ್ಲಿ ಕೆಲವು ಹೆಸರುಗಳನ್ನು ಕೈಬಿಟ್ಟಿದೆ ಎಂದು ಬೈರೇಗೌಡ ಆರೋಪಿಸಿದರು.

ಶಿಕ್ಷಕರಲ್ಲಿ ಗುಂಪುಗಾರಿಕೆ ಸರಿಯಲ್ಲ

ಗುರುವಿನ ಸ್ಥಾನ ಮಹತ್ವದ್ದು. ಈ ನಾಡು ಕಟ್ಟುವ ಭವಿಷ್ಯದ ಸಾವಿರಾರು ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ಮಾಡುವ ಶಕ್ತಿ ಅವರಲ್ಲಿದೆ. ಶಿಕ್ಷಕರಿಗೆ ಸಂ ಅನಿವಾರ್ಯವಾಗಿದೆ. ಆದರೆ, ಬಡ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರು ರಾಜಕಾರಣಿಗಳಂತೆ ಗುಂಪುಗಳಾಗಿ ಅಧಿಕಾರದ ವ್ಯಾಮೋಹಕ್ಕೆ ಜವಾಬ್ದಾರಿ ಮರೆತು ನಡೆದುಕೊಳ್ಳುತ್ತಿರುವುದು ಬೇಸರ ತರಿಸಿದೆ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಿರ್ಮಾಣವಾಗದ ಗುರುಭವನ

ದಿ.ಸೊಣ್ಣಪ್ಪರೆಡ್ಡಿ ಕಾಲದಿಂದ ಈವರೆಗೆ ಅನೇಕ ನೌಕರರು ಶಿಕ್ಷಕರ ಸಂದ ಪದಾಧಿಕಾರಿಗಳಾಗಿದ್ದಾರೆ. 18&20 ವರ್ಷಗಳಲ್ಲಿ ಗುರುಭವನ ನಿರ್ಮಾಣಕ್ಕಾಗಿ ಹಾಕಿರುವ ಅಡಿಪಾಯ ಮೇಲಕ್ಕೇ ಏಳಲೇ ಇಲ್ಲ. ಮುಳ್ಳು, ಗಿಡ ಗಂಟಿಗಳು ಬೆಳೆದಿವೆ. ಇದು ನಮ್ಮ ಶಿಕ್ಷಕರ ಕಣ್ಣಿಗೆ ಕಾಣುತ್ತಿಲ್ಲವೇ? ಇದನ್ನು ಗಮನಿಸಿದರೆ ಆಯ್ಕೆಯಾದ ಶಿಕ್ಷಕರ ಇಚ್ಛಾಶಕ್ತಿ ಮತ್ತು ಸೇವಾ ಮನೋಭಾವ ಎಷ್ಟಿದೆ ಎಂಬುದನ್ನು ತೋರಿಸುತ್ತದೆ ಎಂಬುದ ಸ್ವಾಭಿಮಾನಿ ಶಿಕ್ಷಕರ ಅಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net