ಸರ್ಕಾರಿ ಕಾರ್ಯಕ್ರಮಕ್ಕು ಬಂತು 'ಪರಮ್​' ಬಾಟಲಿ ನೀರು!

Param_Water
Published on

ತುಮಕೂರು: ಯಾವುದೇ ಸರ್ಕಾರಿ ಸಭೆ, ಸಮಾರಂಭ, ಕಾರ್ಯಕ್ರಮಗಳಲ್ಲಿಯೂ ಬಾಟಲಿ ನೀರು ಬಳಸಬಾರದು ಎಂದು ರಾಜ್ಯ ಸರ್ಕಾರ ಆದೇಶಿಸಿದ್ದರೂ ಸೋಮವಾರ ಕಂದಾಯ ಸಚಿವರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲಾ ಅಧಿಕಾರಿಗಳಿಗೂ ಅರ್ಧ ಲೀಟರ್​ ಬಾಟಲಿ ನೀರು ನೀಡಲಾಗಿತ್ತು.

ಕಂದಾಯ ಸಚಿವ ಕೃಷ್ಣಬೈರೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ಕಾರದ ಸುತ್ತೋಲೆ ಉಲ್ಲಂಘಿಸಿ ನೀಡಿದ ನೀರಿನ ಬಾಟಲಿಗಳೂ ಗಮನ ಸೆಳೆದವು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಒಡೆತನದ ಸಂಸ್ಥೆಯಿಂದ ಇತ್ತೀಚೆಗಷ್ಟೇ ಉತ್ಪಾದನೆ ಆರಂಭಿಸಿರುವ "ಪರಮ್​' ಹೆಸರಿನ ನೀರಿನ ಬಾಟಲಿಗಳನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಬಳಸಿದ್ದು ವಿಶೇಷ ಎನ್ನಿಸಿತು. ವೇದಿಕೆ ಮೇಲೆ ಗಾಜಿನ ಲೋಟದಲ್ಲಿ "ಪರಮ್​' ನೀರು ಕೊಡಲಾಗಿತ್ತು. ಉಳಿದಂತೆ ಎಲ್ಲರಿಗೂ ಬಾಟಲಿ ನೀರು ನೀಡಲಾಗಿತ್ತು. ಜಿಲ್ಲಾಧಿಕಾರಿ ಶುಭಕಲ್ಯಾಣ, ಜಿಪಂ ಸಿಇಒ ಜಿ.ಪ್ರಭು ಕೂಡ ಸಾಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net