

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಕರ್ನಾಟಕ ಮತ್ತು ತೆಲಂಗಾಣಕ್ಕೆ ಸಂಪರ್ಕ ಕೊಂಡಿಯಾದ ಕÊಷ್ಣಾ ನದಿಗೆ ನಿರ್ಮಿಸಬೇಕೆಂದಿರುವ ಬೋಸ್ಟನ್ ಮಾದರಿ ಸೇತುವೆ ಕಾಮಗಾರಿ ಪ್ರಾರಂಭವಾಗಿ ೫.೫ ವಷÀð ಕಳೆದರೂ ಅರ್ಧದಷ್ಟು ಕಾಮಗಾರಿಯೂ ಪೂರ್ಣಗೊಳ್ಳದೆ ಇರುವುದರಿಂದ ಜನರು ಭಯದಿಂದ ಹಳೆಯ ಕಾಲದ ಸೇತುವೆಯಲ್ಲಿ ಸಂಚಾರ ಮಾಡುವಂತಾಗಿದೆ.
ಮಹಿಬೂಬ್ನಗರ,ಕಲಬುರಗಿ,ಯಾದಗಿರಿ ಹಾಗೂ ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಈ ಮಾರ್ಗ ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದೆ. ಈಗಿರುವ ಸೇತುವೆ ನಿಜಾಮರ ಕಾಲದಲ್ಲಿ ನಿರ್ಮಿಸಿದ್ದು, ಹಳೆದಾಗಿರುವ ಕಾರಣ ದಿನೆ ದಿನೇ ಶಿಥಿಲಗೊಳ್ಳುತ್ತಿದ್ದು,ಅಪಾಯದಲ್ಲೇ ನಿತ್ಯ ಸಾವಿರಾರು ವಾಹನಗಳು ಓಡಾಡುವಂತಾಗಿದೆ.
ಈ ಎಲ್ಲ ಕಾರಣಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಬೋಸ್ಟನ್ ಮಾದರಿಯಲ್ಲಿ ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರÀ ಮುಂದಾಗಿತ್ತು. ಆದರೆ ಕಾಮಗಾರಿ ಪ್ರಾರಮಭವಾಗಿ ೫.೫ ವರ್ಷ ಕಳೆಯುತ್ತ ಬಂದರೂ ಕೇವಲ ನಿರ್ಮಾಣ ಹಂತದಲ್ಲಿರುವುದರಿAದ ಜನರಲ್ಲಿ ನಿರಾಸೆ ಮೂಡಿದೆ.
ಯಾವಾಗ ಕಾಮಗಾರಿ ಪ್ರಾರಂಭ?
ರಾಷ್ಟಿ÷್ರÃಯ ಹೆದ್ದಾರಿ ೧೬೭ರ ಕಾಮಗಾರಿಯನ್ನು ೨೦೧೮-೨೦೧೯ ರಲ್ಲಿ ಪ್ರಾರಂಭಿಸಲಾಗಿದ್ದು, ಕಾಮಗಾರಿ ಪ್ರಾರಂಭವಾದ ಎರಡೂವರೆ ವಷÀðದಲ್ಲಿ ಪೂರ್ಣಗೊಳ್ಳಬೇಕಿತ್ತು,ಆದರೆ ೫.೫ ವಷÀð ಕಳೆದರೂ ಅರ್ಧದಷÀÄ್ಟ ಕಾಮಗಾರಿಯೂ ಪೂರ್ಣಗೊಂಡಿಲ್ಲ. ಸದ್ಯದ ಕಾಮಗಾರಿಯನ್ನು ಅವಲೋಕಿಸಿದರೆ ಸೇತುವೆ ನಿರ್ಮಾಣ ಈಗಲೇ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇದುವರೆಗೆ ಕಾಲಂಗಳನ್ನು ನಿರ್ಮಾಣ ಮೇಲೆ ತ್ರೀಬುಜಾಕಾರದ ಕಾಲಂ ನಿರ್ಮಾಣ ಮಾಡಿದ್ದಾರೆ. ಕಳೆದ ಎರಡು ವಷÀðಗಳ ಬೇಸಿಗೆಯಲ್ಲಿ, ಕೆಲಸಗಳು ಸುಗಮವಾಗಿ ನಡೆಯಲಿಲ್ಲ. ರಾಷ್ಟಿ÷್ರÃಯ ಹೆದ್ದಾರಿ ಪ್ರಾಽಕಾರದ ಮುಖ್ಯ ಎಂಜಿನಿಯರ್ಗಳು ತ್ವರಿತಗತಿಯಲ್ಲಿ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅನುದಾನ ಎಷ್ಟು?
ಸೇತುವೆ ನ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ೨೦೧೯, ಮೇ ೭ ಕ್ಕೆ ಸೇತುವೆ ನಿರ್ಮಾಣಕ್ಕೆ ೧೫೫ ಕೋಟಿ ರೂ. ವೆಚ್ಚದ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕೂಡ ಕರೆದಿದ್ದು, ಮಹಾರಾಷÀ್ಟ÷್ರದ ತೇಜನ್ ಸೂಪರ್ ಸ್ಪೆಕ್ಟರ್ ಸಂಸ್ಥೆ ಟೆಂಡರ್ ಪಡೆದಿದ್ದ ಸಂಸ್ಥೆ ಕೈಬಿಟ್ಟಿದೆ. ೨೦೨೨ರಲ್ಲಿ ಗುತ್ತೇದಾರ್ ಎಂಬ ಇನ್ನೊಂದು ಕಂಪನಿ ೨೧೦ ಕೋಟಿ ರೂ.ಗಳಲ್ಲಿ ಕಾಮಗಾರಿ ಮಾಡಲು ಸಿದ್ಧವಾಗಿದೆ. ಎರಡು ವರ್ಷ ಕಳೆದರೂ ಕಾಮಗಾರಿಗಳಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಹಿಂದಿನ ಸಂಸದ ರಾಜಾ ಅಮರೇಶ್ವರ ನಾಯಕ ಅವಽಯಲ್ಲಿ ರಾಯಚೂರಿನಲ್ಲಿ ಪ್ರಾಽಕಾರ ಪ್ರಾದೇಶಿಕ ಕಚೇರಿ ತೆರೆಯಲಾಗಿತ್ತು. ಇದರಿಂದ ಕಾಮಗಾರಿಗೆ ವೇಗ ಸಿಗುತ್ತದೆ ಎಂಬ ಭ್ರಮೆಗಳು ದೂರವಾಗಿವೆ. ನೂತನ ಸಂಸದ ಕುಮಾರನಾಯಕ್ ಅವರು ನಿಗದಿತ ಅವಽಯಲ್ಲಿ ಸೇತುವೆ ನಿರ್ಮಿಸಲು ಮುಂದಾಗಬೇಕು ಎಂದು ಎರಡೂ ರಾಜ್ಯಗಳ ಜನತೆ ಮನವಿ ಮಾಡುತ್ತಿದ್ದಾರೆ.
ಸಾಮರ್ಥ್ಯ ಕಳೆದುಕೊಂಡಿರುವ ಹಳೆಯ ಸೇತುವೆ
೧೦೦ ವರ್ಷಗಳ ಹಿಂದೆ ನಿಜಾಮರ ಆಳ್ವಿಕೆಯಲ್ಲಿ ನಿರ್ಮಿಸಿದ ಹಳೆಯ ಸೇತುವೆ ರಸ್ತೆ ಸಾಮರ್ಥ್ಯ ಕಳೆದುಕೊಂಡಿದೆ. ಆಗಿನ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆಗೆ ಅನುಗುಣವಾಗಿ ನಿರ್ಮಿಸಲಾಗಿದ್ದ ಸೇತುವೆ ಈಗ ಶಿಥಿಲಾವಸ್ಥೆ ತಲುಪಿದೆ. ನಿತ್ಯ ನೂರಾರು ಸಾರ್ವಜನಿಕ ಸಾರಿಗೆ ಲಾರಿಗಳು, ಮರಳು ಟಿಪ್ಪರ್ಗಳು ಮತ್ತು ದೊಡ್ಡದಾದ ಟ್ಯಾಂಕರ್ಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಕರ್ನಾಟಕ ಮತ್ತು ತೆಲಂಗಾಣ ಸಾರಿಗೆ ಬಸ್ಸುಗಳು, ಕಾರುಗಳು ಮತ್ತು ಇತರ ವಾಹನಗಳು ಸಂಚರಿಸುತ್ತವೆ. ಕೆಲವು ಬಾರಿ ವಾಹನಗಳು ಕೆಟ್ಟು ನಿಂತು ಗಂಟೆಗಟ್ಟಲೆ ಸಂಚಾರಕ್ಕೆ ಅಡ್ಡಿಪಡಿಸುವ ಘಟನೆಗಳು ನಿತ್ಯ ನಡೆಯುತ್ತಿವೆ.
--------------
ಕೋಟ್
---------
ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳ ಸಂಪರ್ಕ ಕೊಂಡೆಯಾದ ಶಕ್ತಿನಗರ ಸೇತುವೆ ಕಾಮಗಾರಿ ಪ್ರಾರಂಭವಾಗಿದ್ದು, ತ್ವರೀತಗತಿಯಲ್ಲಿ ಕಾಮಗಾರಿ ಮುಗಿಸಲು ಸಂಬAಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಜತೆಗೆ ಅಽಕಾರಿಗಳ ಸಭೆ ಕರೆದು ಎರಡು ರಾಜ್ಯದ ಅಽಕಾರಿಗಳು ಉತ್ತಮ ಸಂಬAಧದಿAದ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ.
ಜಿ.ಕುಮಾರ ನಾಯಕ ಸಂಸದರು ರಾಯಚೂರು
-----------