ತೀವ್ರವಾದದಿಂದ ಸ್ವಾತಂತ್ರೃದ ಗುರಿ ಹೊಂದಿದ್ದ ಬೋಸ್

Bose, who had a strong and independent goal,
ಇಳಕಲ್ಲ ನಗರದ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಜಯಂತಿ ಹಾಗೂ ನೂತನ ಅಧ್ಯಕ್ಷ ಹಾಗೂ ನಿರ್ದೇಶಕರುಗಳಿಗೆ ಸತ್ಕಾರ ಸಮಾರಂಭ ನಡೆಯಿತು. ಗುರುಮಹಾಂತ ಶ್ರೀಗಳು, ನಾಗರಾಜ ನಗರಿ, ಪುರುಷೋತ್ತಮ ದರಕ, ಸತೀಶ ಸಪ್ಪರದ ಮತ್ತಿತರರಿದ್ದರು.
Published on

ಇಳಕಲ್ಲ: ದೇಶದಲ್ಲಿ ಸಂಘಟನಾ ಶಕ್ತಿ ಕೊರತೆಯಿಂದಾಗಿ ಬ್ರಿಟಿಷರು ತಮ್ಮ ಆಡಳಿತ ನಡೆಸಲು ಅವಕಾಶವಾಯಿತು ಎಂದು ಇಳಕಲ್ಲ-ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಹೇಳಿದರು.

ನಗರದ ಸುರಕ್ಷಾ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ ನೇತಾಜಿ ಸುಭಾಸ್‌ಚಂದ್ರ ಬೋಸ್ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸೌಮ್ಯವಾದ ಮತ್ತು ತೀವ್ರವಾದದ ಎರಡು ಗುಂಪುಗಳಿದ್ದು, ಮಹಾತ್ಮ ಗಾಂಧಿ ಅಹಿಂಸೆ ಮತ್ತು ಶಾಂತಿಯಿಂದ ಸ್ವಾತಂತ್ರ್ಯ ಪಡೆಯುವ ಗುರಿ ಹೊಂದಿದ್ದರೆ, ಬೋಸ್ ಅವರು ತೀವ್ರವಾದದ ಮೂಲಕ ಸ್ವಾತಂತ್ರೃ ಪಡೆಯುವ ಗುರಿ ಹೊಂದಿದ್ದರು. ಆದರೆ, ಈ ಎರಡು ಗುಂಪುಗಳ ಉದ್ದೇಶ ಒಂದೇ ಆಗಿತ್ತು ಎಂದರು.

ಎಸ್‌ಎಸ್‌ಕೆ ಬ್ಯಾಂಕ್ ನಿರ್ದೇಶಕ ನಾಗರಾಜ ನಗರಿ ಮಾತನಾಡಿದರು.

ಸಂಸ್ಥೆ ಅಧ್ಯಕ್ಷ ಪುರುಷೋತ್ತಮ ದರಕ, ಉಪಾಧ್ಯಕ್ಷ ಲಕ್ಷಣ ಗುರಂ, ಇಳಕಲ್ಲ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸತೀಶ ಸಪ್ಪರದ, ನಿರ್ದೇಶಕರಾದ ಮಂಜುನಾಥ ಶೆಟ್ಟರ್, ಎಂ.ಎಸ್. ಪಾಟೀಲ್, ಲಕ್ಷ್ಮಣ ಗುರಂ, ಮಂಜುನಾಥ ಶೆಟ್ಟರ, ವಿಜಯ ಗಿರಡ್ಡಿ, ಲತಾ ಚಂದ್ರಹಾಸ ಹೆರೂರ, ಎಸ್‌ಎಸ್‌ಕೆ ಬ್ಯಾಂಕ್ ಅಧ್ಯಕ್ಷ ಭೋಜರಾಜ ಅರಸಿದ್ಧಿ, ಸದಸ್ಯ ನಾಗರಾಜ ನಗರಿ ಮತ್ತಿತರರಿದ್ದರು. ರುದ್ರಪ್ಪ ಅರಳಿಕಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net