ಬೋರವೆಲ್​ ಕಲೆಕ್ಷನ್​ ಕೊಡುತ್ತಿದ್ದ ಸಮಯದಲ್ಲಿ ಸಾವು

Crime Logo
Published on

ಬಂಕಾಪುರ: ಬೋರವೆಲ್​ಗೆ ವಿದ್ಯುತ್​ ಕಲೆಕ್ಷನ್​ ಕೊಡುವ ಸಮಯದಲ್ಲಿ ವಿದ್ಯುತ್​ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಸವೂರ ಗ್ರಾಮದಲ್ಲಿ ಗುರುವಾರ ನಡೆದಿದೆ.

ಬಾಡ ಗ್ರಾಮದ ಸೋಮಶೇಖರಯ್ಯ ಬಸಯ್ಯ ಯತ್ತಿನಮನಿ (42) ಮೃತ ವ್ಯಕ್ತಿ.

ಈತ ಜಮೀನಿನಲ್ಲಿ ಬೋರವೆಲ್​ಗೆ ವಿದ್ಯುತ್​ ಕಲೆಕ್ಷನ್​ ಕೊಡುತ್ತಿದ್ದ ಸಮಯದಲ್ಲಿ ವಿದ್ಯುತ್​ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಬಂಕಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net