ಜಾನಪದ ಮಹಿಳೆಯರ ಉಡಿಯಲ್ಲಿ ಹುಟ್ಟಿದೆ

Born in the attire of folk women
ವಿಜಯಪುರದ ಆನಂದ ನಗರದ ಶ್ರೀ ದಾನಮ್ಮ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆ ಹಮ್ಮಿಕೊಂಡಿದ್ದ ಜಾನಪದ ಗೋಷ್ಠಿಯನ್ನು ವಿಠಲ ಕಟಕದೊಂಡ ಉದ್ಘಾಟಿಸಿದರು. ಬಿ.ಎನ್​. ಪಾಟೀಲ, ಶೀವಲೀಲಾ ಮುರಾಳ, ಹಾಸಿಂಪೀರ ವಾಲಿಕಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಜಾನಪದ ಸಾಹಿತ್ಯ ಅತ್ಯಂತ ಶ್ರೀಮಂತ ಹಾಗೂ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ನಾಗಠಾಣ ಶಾಸಕ ವಿಠಲ ಕಟಕದೊಂಡ ಹೇಳಿದರು.

ಇಲ್ಲಿನ ಆನಂದನಗರದ ಶಿವಶರಣೆ ದಾನಮ್ಮ ದೇವಸ್ಥಾನ ಸಮಿತಿಯ 14ನೇ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾನಪದ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಹಿರಿಯರು ಜಾನಪದ ಸಾಹಿತ್ಯದ ಮಾಲಿಕರು ಎಂದರು.

ಜಾನಪದ ಸಾಹಿತ್ಯ ವಿದ್ವಾಂಸ ಬಿ.ಎನ್​. ಪಾಟೀಲ ಮಾತನಾಡಿ, ರೈತರು ಹಾಗೂ ರೈತ ಮಹಿಳೆಯರು ದಿನನಿತ್ಯ ಜಾನಪದ ಹಾಡುಗಳನ್ನು ಹಾಡಿ ಪ್ರಸಾರ ಮಾಡಿದ ಕೀರ್ತಿ ಗ್ರಾಮೀಣರಿಗೆ ಸಲ್ಲುತ್ತದೆ ಎಂದರು.

ಜಾನಪದ ಚಿಂತಕಿ ಶಿವಲೀಲಾ ಮುರಾಳ ಉಪನ್ಯಾಸ ನೀಡಿ, ಮಹಿಳೆಯ ಉಡಿಯಲ್ಲಿಯೇ ಜಾನಪದ ಸಾಹಿತ್ಯ ಹುಟ್ಟಿಕೊಂಡಿದೆ. ಗರತಿ ಜೀವನದ ಅನುಭಾವವನ್ನು ತ್ರಿಪದಿಯ ಮೂಲಕ ಹಾಡಿ ಜಾನಪದ ಸಾಹಿತ್ಯವನ್ನು ಮನೆಮನೆಗೆ ಮುಟ್ಟಿಸಿದ ಗರತಿಯ ಹಾಡುಗಳು ಜನಪ್ರೀಯತೆ ಉಳಿಸಿಕೊಂಡಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯದ ಬುನಾದಿ ಎಂದರು. ಶಿವಾನಂದ ಮಂಗಾನವರ, ಮಹೆತಾಬ ಕಾಗವಾಡ ರೈತ ಗೀತೆ ಹಾಗೂ ತತ್ವಪದಗಳನ್ನು ಹಾಡಿದರು. ಸಾವಿತ್ರಿ ಮಠ ಯೋಗ ಅಭ್ಯಾಸದ ಮಹತ್ವ ಕುರಿತು ಉಪನ್ಯಾಸ ನೀಡಿದರು.

ದೇವಸ್ಥಾನ ಸಮೀತಿಯ ಅಧ್ಯಕ್ಷ ಅಪ್ಪು ಇಟ್ಟಂಗಿ, ರಶ್ಮಿ ಕೋರಿ, ರುದ್ರಗೌಡ ಪಾಟೀಲ, ಆರ್​.ಎಂ. ತೋನಶ್ಯಾಳ ವೇದಿಕೆಯಲ್ಲಿದ್ದರು. ಎಂ.ಬಿ. ಮೂಲಿಮನಿ, ಎಚ್​.ಎಂ. ಬೋರಾವತ, ಎಸ್​.ಎಸ್​. ಪಾಟೀಲ, ರವೀಂದ್ರ ಬಾವೂರ, ಎಂ.ಎಸ್​. ಮೇಟಿ, ಸುಜಾತಾ ಕತ್ತಿ, ಕಮಲಾ ಜುಮನಾಳ, ಗಂಗಾಬಾಯಿ ಸಜ್ಜನ, ಬಸವರಾಜ ಮರನೂರ, ಸಿ.ಎಸ್​. ಚಟ್ಟೆರ, ಪ್ರೇಮಾ ನಂದಿ, ಡಾ. ಸವಿತಾ ಝಳಕಿ, ಕವಿತಾ ಕಲ್ಯಾಣಪ್ಪಗೋಳ, ಶೋಭಾ ಮೇಡೆಗಾರ, ಸಹದೇವ ನಾಡಗೌಡ. ಎಂ.ಜಿ. ಸಜ್ಜನ, ಸುಭಾಷ ಕರಿಕಬ್ಬಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net