ಮಹಾತ್ಮರ ಸಂಗದಿಂದ ಜನ್ಮ ಪಾವನ

15ang1 DASOHAMATH
Published on

ಅಣ್ಣಿಗೇರಿ: ಸಜ್ಜನರು ಹಾಗೂ ಮಹಾತ್ಮರ ಸಂಗ ಮಾಡಿದವರ ಜೀವನ ಪಾವನವಾಗುತ್ತದೆ. ದುರ್ಜನರ ಸಂಗ ಮಾಡಿದರೆ ನರಕಯಾತನೆ ಅನುಭವಿಸಬೇಕಾಗುತ್ತದೆ ಎಂದು ನೇಗಿನಹಾಳದ ಸಿದ್ಧಾರೂಢ ಮಠದ ಅದ್ವೈತಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ದಾಸೋಹ ಮಠದ ಲಿಂ. ಸದ್ಗುರು ರುದ್ರಮುನಿ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ ಹಾಗೂ ಪುಣ್ಯಸ್ಮರಣೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಶ್ರೇಷ್ಠವಾದ ನರಜನ್ಮವನ್ನು ಪರಮಾತ್ಮ ನಮಗೆ ಕೊಟ್ಟಿದ್ದಾನೆ. ಜ್ಞಾನಿಗಳು, ಮಹಾತ್ಮರು ಹಾಗೂ ಸಂತರು, ಶರಣರ ಒಡನಾಡಿಗಳಾಗಿ ಸಮಾಜಕ್ಕೆ ನಮ್ಮಿಂದಾಗುವ ಸೇವೆ ಸಲ್ಲಿಸಬೇಕು ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಪಟ್ಟಣದ ನವಲಗುಂದ ರಸ್ತೆ ಹಾಗೂ ಹಳ್ಳಿಕೇರಿ ರಸ್ತೆಯ ಎರಡು ರೈಲ್ವೆ ಗೇಟ್​ನ ಓವರ್ ಬ್ರಿಜ್ ನಿರ್ವಣಕ್ಕೆ ಈಗಾಗಲೇ 74 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಕರಿಕಟ್ಟಿಯ ಕೀರ್ತನ ಕೇಸರಿ ಗುರುನಾಥ ಶಾಸ್ತ್ರೀ, ಕೆ.ಕೆ. ಹಳ್ಳಿಯ ಸುಬ್ರಹ್ಮಣ್ಯ ಮಹಾಸ್ವಾಮೀಜಿ, ಹುಬ್ಬಳ್ಳಿಯ ಬಸವಾನಂದ ಮಹಾಸ್ವಾಮೀಜಿ, ತಾವರಗೇರಿಯ ನಿರ್ಗಣಾನಂದ ಮಹಾಸ್ವಾಮೀಜಿ ಮಾತನಾಡಿದರು. ಸ್ಥಳೀಯ ದಾಸೋಹ ಮಠದ ಶಿವಕುಮಾರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ನೀಲಕಂಠ ಶಾಸ್ತ್ರೀ, ಷಣ್ಮುಖ ಗುರಿಕಾರ, ಶರಣಬಸಪ್ಪ ದೇಶಮುಖ್, ಶ್ರೀಕುಮಾರ ಸಿಕ್ಕೇದೇಸಾಯಿ, ದ್ಯಾಮಣ್ಣ ಕೊಗ್ಗಿ, ಶಂಕ್ರಣ್ಣ ಯಾದವಾಡ, ಪ್ರಕಾಶ ಅಂಗಡಿ, ಮಹಾಂತೇಶ ವಸ್ತ್ರದ, ಉಮೇಶ ಬಿಲ್ಲಹದ್ದಣ್ಣವರ, ನಿಂಗಪ್ಪ ಸುಂಕದ, ಎ.ಆರ್. ಅಕ್ಕಿ, ಅನ್ವರಭಾಷಾ ಹುಬ್ಬಳ್ಳಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net