ಬೋರ್ವೆಲ್ ಕಾರ್ಯನಿರ್ವಹಕರಿಗಿಲ್ಲ ಸಂಬಳ

14 kurugodu new 01
ಕುರುಗೋಡಿನ ಬಸರಕೋಡು ಗ್ರಾಪಂ ಕಚೇರಿ
Published on

ಕುರುಗೋಡು: ಬಸರಗೋಡು ಗ್ರಾಪಂನಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವ ಕೆಲಸಗಾರರಿಗೆ ವರ್ಷವಾದರೂ ಸಂಬಳ ದೊರೆತಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಹೆಣಗಾಡುವ ಪರಿಸ್ಥಿತಿ ಎದುರಾಗಿದೆ.

ಬಸರಕೋಡು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬೋರ್ವೆಲ್ ಹಾಳಾದರೆ ದುರಸ್ತಿ ಕಾರ್ಯಕ್ಕೆ ಕರ್ಚೇಡು ಗ್ರಾಮದಲ್ಲಿ ಗಣೇಶ ಹಾಗೂ ಹಡ್ಲಿಗಿ ಗ್ರಾಮದಲ್ಲಿ ಹೇಮಣ್ಣ ಎಂಬುವರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಆರಂಭದಲ್ಲಿ ನಾಲ್ಕು ತಿಂಗಳ ವೇತನವನ್ನು ಚೆಕ್ ಮೂಲಕ ನೀಡಿದ್ದಾರೆ.

ಗಣೇಶ್ 18, ಹೇಮಣ್ಣ ಎಂಬುವರು 46 ತಿಂಗಳು ಕಾರ್ಯ ನಿರ್ವಹಿಸಿದ್ದರೆ. ಈವರೆಗೂ ಸಂಬಳ ನೀಡದೆ ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಪಿಡಿಒ ಅವರನ್ನು ಕೇಳಿದರೆ ಗ್ರಾಪಂ ಬಳಿ ಅನುದಾನದ ಕೊರತೆ ಇದ್ದು ತೆರಿಗೆ ಸಂಗ್ರಹವಾದಾಗ ಸಂಬಳ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರಾದ ಬಿ.ಬಸವರಾಜ್, ಬೆಣಕಲ್, ರಾಘವೇಂದ್ರ, ಬಿ.ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಪಂ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ತಾತ್ಕಾಲಿಕ ನೇಮಕ ಮಾಡಿಕೊಂಡು ಗ್ರಾಪಂ ಡಿಮ್ಯಾಂಡ್ ರಿಜಿಸ್ಟರ್‌ನಲ್ಲಿ ಹೆಸರು ಸೇರಿಸಿದರೂ ಈವರೆಗೆ ವೇತನ ಏಕೆ ನೀಡಿಲ್ಲ. ತೆರಿಗೆ ಹಣ ಯಾರ ಜೇಬು ಸೇರುತ್ತಿದೆ ಎಂಬುದು ಪ್ರಶ್ನೆಯಾಗಿದೆ. ಬಾದಾಮಿ ಭಾಸ್ಕರ ವಕೀಲ ಕರ್ಚೇಡು ಗ್ರಾಮ ನೀರಿನ ಸಮಸ್ಯೆ ನಿಯಂತ್ರಣಕ್ಕೆ ಇಬ್ಬರನ್ನು ತಾತ್ಕಾಲಿಕವಾಗಿ ನೇಮಿಸಲಾಗಿದೆ. ಅವರಿಗೆ ತೆರಿಗೆ ಹಣದಲ್ಲೇ ವೇತನ ನೀಡಬೇಕಾಗಿರುವುದರಿಂದ ವಿಳಂಬವಾಗಿದೆ. ಗ್ರಾಪಂ ಬಳಿ ಅನುದಾನದ ಕೊರತೆ ಇದ್ದು ಶೀಘ್ರ ಸಮಸ್ಯೆ ಪರಿಹರಿಸಲಾಗುವುದು. ಮಹಮ್ಮದ್ ಹುಸೇನ್ ಪಿಡಿಒ ಬಸರಕೋಡು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net