ವಿದ್ಯುತ್ ತಂತಿ ಕತ್ತರಿಸಿದ ಕಿಡಿಗೇಡಿಗಳು

borewell
ವಿದ್ಯುತ್ ತಂತಿ ಕತ್ತರಿಸಿದ ಕಿಡಿಗೇಡಿಗಳು
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನಗರದ ಕಮ್ಮವಾರಿ ನಗರ, ತ್ಯಾಗರಾಜ ಬಡವಣೆ, ನಂದಾಶ್ರೀ ಕಲ್ಯಾಣ ಮಂಟಪ ವಾರ್ಡ್ ಭಾಗದಲ್ಲಿ ನಗರಸಭೆಯ ಸುಮಾರು 3 ಕೊಳವೆ ಬಾವಿಗಳ ವಿದ್ಯುತ್ ಸಂಪರ್ಕದ ತಂತಿಗಳನ್ನು ತಡರಾತ್ರಿ ಕಿಡಿಗೇಡಿಗಳು ಕತ್ತರಿಸಿದ್ದಾರೆ.
ಗುರುವಾರ ಮುಂಜಾನೆ ಕೊಳವೆ ಬಾವಿ ಮೂಲಕ ನೀರು ಹಾಯಿಸಲು ನೀರಗಂಟಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ನಗರಸಭಾ ಆಯುಕ್ತ ಜಹೀರ್ ಅಬ್ಬಾಸ್ ಹಾಗೂ ವಾರ್ಡ್ ಸದಸ್ಯ ಕೇಶವ್ ಮೂರ್ತಿ ಅವರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net