ಬೋರ್​ವೆಲ್​ ಕೊರೆಯುವಾಗ ಮಣ್ಣು ಕುಸಿತ; ಹೊಂಡದೊಳಗೆ ಬಿದ್ದವನ ರಕ್ಷಣಾ ಕಾರ್ಯಾಚರಣೆ

Boy 16 Feb 20
Published on

ಉಡುಪಿ: ಬೋರ್​ವೆಲ್​ ಕೊರೆಯುವಾಗ ಮಣ್ಣು ಕುಸಿದು ರೋಹಿತ್​ ಖಾರ್ವಿ ಎಂಬಾತ ಹೊಂಡದಲ್ಲಿ ಸಿಲುಕಿದ್ದಾನೆ.

ಬೈಂದೂರಿನ ಮರವಂತೆಯಲ್ಲಿ ಘಟನೆ ನಡೆದಿದೆ. ಅಲ್ಲಿ ಕೊಳವೆ ಬಾವಿ ತೋಡಲಾಗುತ್ತಿತ್ತು. ಈ ವೇಳೆ ಬೋರ್​ವೆಲ್​ ಪೈಪ್​ ಸುತ್ತ ಮಣ್ಣು ಕುಸಿದಿದ್ದರಿಂದ ಸ್ಥಳದಲ್ಲಿದ್ದ ರೋಹಿತ್​ ಭೂಮಿಯಾಳದಲ್ಲಿ 15 ಅಡಿ ಕುಸಿದಿದ್ದಾನೆ.

ರೋಹಿತ್​ನನ್ನು ರಕ್ಷಿಸಲು ಅಗ್ನಿಶಾಮಕದ ದಳದ ಸಿಬ್ಬಂದಿ ಆಗಮಿಸಿದ್ದಾರೆ. ಅವರೊಂದಿಗೆ ಸ್ಥಳೀಯರೂ ಕೈ ಜೋಡಿಸಿದ್ದಾರೆ. ವೈದ್ಯರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಹೊಂಡದ ಸುತ್ತ ಮಣ್ಣು ಮತ್ತೆ ಕುಸಿಯಬಾರದು ಎಂದು ಅದರೊಳಗೆ ಡ್ರಮ್​ ಅಳವಡಿಸಲಾಗಿದೆ.

ಹೊಂಡದಲ್ಲಿ ಇರುವ ರೋಹಿತ್​ಗೆ ಯಾವುದೇ ಅಪಾಯ ಸದ್ಯಕ್ಕಿಲ್ಲ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net