ಗಡಿನಾಡು ಪತ್ರಕರ್ತರ ಕಾರ್ಯಾಗಾರ 10ಕ್ಕೆ

VADDAGERE NAGAYARAJAYA
Published on

ಚಳ್ಳಕೆರೆ: ನಗರದ ರೋಟರಿ ಬಾಲಭವನದಲ್ಲಿ ಸೆ.10ರ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟ ವತಿಯಿಂದ ಗಡಿನಾಡು ಪತ್ರಕರ್ತರ ಕಾರ್ಯಾಗಾರ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಲಿದ್ದು, ಸಾಹಿತಿ ಡಾ.ವಡ್ಡಗೆರೆ ನಾಗರಾಜಯ್ಯ ಉಪನ್ಯಾಸ ಮಾಡಲಿದ್ದಾರೆ.

ಅತಿಥಿಗಳಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ವೈ.ತಿಪ್ಪೇಸ್ವಾಮಿ, ಮಹಾಂತೇಶ್ ರಾವ್, ಎಂ.ಜೆ.ರಾಘವೇಂದ್ರ, ಸುನಿಲ್‌ಕುಮಾರ್, ವಾಸುದೇವ್, ಅನಂತಮೂರ್ತಿ ನಾಯಕ್, ಟಿ.ಬಿ.ರಾಜಣ್ಣ, ಲಿಂಗೇಗೌಡ, ಕೆ.ವೀರಭದ್ರಯ್ಯ, ತಿಪ್ಪಣ್ಣಮರಿಕುಂಟೆ, ಕೆ.ಎಸ್.ಸುರೇಶ್ ಭಾಗವಹಿಸಲಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net