ಶಿಕ್ಷಕ ರಂಜಿತ್‌ಸಿಂಹ ದಿಸಾಳೆಗೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಭಿನಂದನೆ

disale
Published on

ಬೆಂಗಳೂರು: ಪ್ರತಿಷ್ಠಿತ ‘ಗ್ಲೋಬಲ್ ಟೀಚರ್’ ಪುರಸ್ಕಾರಕ್ಕೆ ಭಾಜನರಾಗಿರುವ ಶಿಕ್ಷಕ ರಂಜಿತ್‌ಸಿಂಹ ದಿಸಾಳೆ ಸಾಧನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಕ್ತ ಕಂಠದಿಂದ ಶ್ಲಾಸಿದ್ದು, ಶೀಘ್ರವೇ ಕಾರ್ಯಕ್ರಮ ಆಯೋಜಿಸಿ ಅವರನ್ನು ಸನ್ಮಾನಿಸಲಾಗುವುದು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಮಹಾರಾಷ್ಟ್ರದ ಸೊಲ್ಲಾಪುರದ ಪರಿಟೇವಾಡಿಯ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ಮಾತೃಭಾಷೆ ಮರಾಠಿಯಾದರೂ ಕನ್ನಡವನ್ನು ಕಲಿತು ಈ ಶಾಲೆಯ ಮಕ್ಕಳಿಗೆ ಬೋಧಿಸುತ್ತಿರುವ ದಿಸಾಳೆ ಕಾರ್ಯ ಶಾಘನೀಯ. ತಂದೆಯ ಆಶಯದಂತೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಅಭಿನಂದನೀಯ ಎಂದು ಪ್ರಾಧಿಕಾರ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರಶಂಸಿದ್ದಾರೆ.

ಕನ್ನಡ ಬಾಹುಳ್ಯವಿರುವ ಗಡಿಭಾಗದಲ್ಲಿ ಮರಾಠಿ ಮಾಧ್ಯಮವಿದ್ದ ಕನ್ನಡ ಶಾಲೆಗಳಿಗೆ ಕನ್ನಡ ಭಾಷೆ ವಿದ್ಯಾರ್ಥಿಗಳು ಬರದಿರುವ ಸಂದರ್ಭದಲ್ಲಿ ಶಾಲೆಯ ಪಠ್ಯವನ್ನು ಕನ್ನಡಕ್ಕೆ ಭಾಷಾಂತರಿಸಿ ವಿಡಿಯೋ ಹಾಗೂ ಇನ್ನಿತರ ತಂತ್ರಜ್ಞಾನದ ಮೂಲಕ ಕನ್ನಡವನ್ನು ಕಲಿಸುವ ಕಾರ್ಯ ಮಾಡಿದ್ದರು. ಇವರ ಸಾಧನೆಗಳನ್ನು ಗುರುತಿಸಿ ಈಗಾಗಲೇ ‘ಸೃಜನಶೀಲ ಸಂಶೋಧಕ’ ಸೇರಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಇದೀಗ ಅವರಿಗೆ ಜಾಗತಿಕ ಪ್ರಶಸ್ತಿ ಬಂದಿದೆ. ಹಾಗಾಗಿ, ಸ್ವತಃ ಸಿಎಂ ಅವರು ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net