ಬೋರ್​ವೆಲ್​ ಚಾಲೂ ಮಾಡಲು ಹೋದ ರೈತ ವಿದ್ಯುತ್​ ತಗುಲಿ ಸಾವು

Crime Logo
Published on

ರಾಣೆಬೆನ್ನೂರ: ಗುಲಾಬಿ ಹೂವಿನ ತೋಟಕ್ಕೆ ಎಣ್ಣೆ ಹೊಡೆಯಲು ನೀರು ಸಂಗ್ರಹಿಸುವ ಸಲುವಾಗಿ ಬೋರ್​ವೆಲ್​ ಮಷಿನ್​ ಚಾಲೂ ಮಾಡಲು ಹೋದ ರೈತ ವಿದ್ಯುತ್​ ತಗುಲಿ ಮೃತಪಟ್ಟ ಟನೆ ತಾಲೂಕಿನ ಕೂನಬೇವು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಮಾಲತೇಶ ಗುಡ್ಡಪ್ಪ ಹಲವಾಗಿಲ (30) ಮೃತ ರೈತ.
ಇವರು ಜಮೀನಿನಲ್ಲಿ ಬೆಳೆದಿದ್ದ ಗುಲಾಬಿ ಹೂವಿನ ಸಸಿಗಳಿಗೆ ಔಷಧ ಸಿಂಪಡಣೆ ಮಾಡುವ ಸಲುವಾಗಿ ನೀರು ಸಂಗ್ರಹಿಸಲೆಂದು ಬೋರ್​ವೆಲ್​ನ ಮಷಿನ್​ ಚಾಲೂ ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್​ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net