ಬೋರಗಾಂವ ಅಭಿವೃದ್ಧಿಗೆ ಶ್ರಮ

10Brg1
Published on

ಬೋರಗಾಂವ: ಸಾಮಾಜಿಕ ಕಾರ್ಯಗಳಿಗೆ ಆದ್ಯತೆ ನೀಡಿದ್ದೇವೆ. ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಾಗ ಸಾಮಾನ್ಯ ಕಾರ್ಯಕರ್ತರನ್ನು ಪರಿಗಣಿಸಿ ಪ್ರತಿ ಹಳ್ಳಿಯಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಬೋರಗಾಂವ ಪಟ್ಟಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ ಮಾದರಿಯನ್ನಾಗಿಸಿದ್ದೇವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಪಟ್ಟಣದ ರಾಮನಗರದಲ್ಲಿ ಬೋರವೆಲ್ ಕಾಮಗಾರಿಗೆ ಚಾಲನೆ ಮತ್ತು ಖಂಡೋಬಾ ದೇವಸ್ಥಾನದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.

ತಾರತಮ್ಯ ಮತ್ತು ರಾಜಕೀಯ ಮಾಡದೆ ಪಟ್ಟಣದಲ್ಲಿ ಕೋಟ್ಯಂತರ ರೂ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಪಟ್ಟಣಕ್ಕೆ ಮೂಲಸೌಕರ್ಯ ಕಲ್ಪಿಸಲು ಶೀಘ್ರ ಅನುದಾನ ಒದಗಿಸುತ್ತೇವೆ ಎಂದು ಭರವಸೆ ನೀಡಿದರು.

ಪಟ್ಟಣ ಪಂಚಾಯಿತಿ ಸದಸ್ಯ ಶರದ ಜಂಗಟಿ ಮಾತನಾಡಿ, ಶಾಸಕಿ ಶಶಿಕಲಾ ಜೊಲ್ಲೆ ಅವರ ವಿಶೇಷ ಪ್ರಯತ್ನದಿಂದಾಗಿ ಬೋರವೆಲ್ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ 23.75 ಲಕ್ಷ ರೂ. ಅನುದಾನ ಮಂಜೂರಾಗಿದೆ. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ನೀಡಿದ್ದಾರೆ. ಸಿಸಿ ರಸ್ತೆ, ಚರಂಡಿ, ಬೀದಿ ದೀಪಗಳು ಸೇರಿ ವಿವಿಧ ಅಭಿವೃದ್ಧಿ ಕಾರ್ಯಗಳ ಮಂಜೂರಾತಿಗೆ ಕಳುಹಿಸಲಾಗಿದ್ದು, ಶೀಘ್ರ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ದಾದಾಸೋ ಭಾದುಲೆ, ಬಾಬಾಸಾಹೇಬ ಚೌಗುಲೆ, ಬಿ.ಕೆ. ಮಹಾಜನ, ಮಹಿಪತಿ ಖೋತ, ರಾಣಿ ಬೇವನಕಟ್ಟಿ, ಉತ್ತಮ ಕದಂ, ಜಿತೇಂದ್ರ ಭೋಜೆ, ಮಹಾದೇವ ಐದಮಾಳೆ, ಅಜಿತ್ ಕಾಂಬಳೆ, ಶ್ರೀಪಾಲ ಗೋಸಾವಿ, ಜಿತೇಂದ್ರ ಪಾಟೀಲ, ಕಿಶನ್ ಗೋಸಾವಿ, ಕಾಕಾಸಾಹೇಬ ವಾಘಮೋಡೆ, ನಾರಾಯಣ ಅಡೇಕರ, ಫಿರೋಜ್ ಅಫ್ರಾಜ್, ಶಂಕರ ಗುರವ, ಭರತ ಕಾಂಬಳೆ, ಅಯೂಬ್ ಮಕಾಂದಾರ್, ಭರತ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net