

ಬೋರಗಾಂವ: ಇಲ್ಲಿನ ವತ್ತ ಅಗಲೀಕರಣ ಆಗಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಲೋಕೋಪಯೋಗಿ ಇಲಾಖೆಯಿಂದ ನಾಲ್ಕು ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಹೆಚ್ಚುತ್ತಿರುವ ಸಂಚಾರ ದಟ್ಟಣೆ ಹಾಗೂ ಪಟ್ಟಣದ ಸೌಂದರ್ಯೀಕರಣಕ್ಕಾಗಿ ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.
ಬೋರಗಾಂವದಿಂದ ಬೋರಗಾಂವವಾಡಿವರೆಗೆ ಲೋೀಕೋಪಯೋಗಿ ಇಲಾಖೆಯಿಂದ ಬಿಡುಗಡೆಯಾದ 3.50 ಕೋಟಿ ರೂ. ವೆಚ್ಚದ ರಸ್ತೆ ಹಾಗೂ ವಿವಿಧ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅಭಿವೃದ್ಧಿ ಜತೆಗೆ ರಾಜ್ಯ ಸರ್ಕಾರವು ಸಾರ್ವಜನಿಕ ಕಲ್ಯಾಣ ಕಾರ್ಯಗಳಿಗೂ ಆದ್ಯತೆ ನೀಡುತ್ತಿದೆ. ಕ್ಷೇತ್ರದ ಸಮಗ್ರ ಅಭಿವದ್ಧಿಗಾಗಿ ಶ್ರಮಿಸಲಾಗುವುದು. ರಸ್ತೆ ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಭಾಗದ ರಸ್ತೆ ಸುಧಾರಣೆಗಾಗಿ ಸರ್ಕಾರದಿಂದ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮುಖಂಡರಾದ ಉತ್ತಮ ಪಾಟೀಲ, ಪಂಕಜ ಪಾಟೀಲ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಅಣ್ಣಾಸಾಹೇಬ ಹವಲೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿಂಟು ಕಾಂಬಳೆ, ಭಾರತಿ ವಾಸವಾಡೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಭಯಕುಮಾರ ಮಗದುಮ್, ಸಂಗೀತಾ ಶಿಂಗೆ, ಅಶ್ವಿನಿ ಪವಾರ, ರೋಹಿತ ಪಾಟೀಲ, ಅನೂಜ ಹವಲೆ, ಮನೋಜ ಪಾಟೀಲ, ಮಾರುತಿ ನಿಕಂ, ಜೈಪಾಲ ಹವಲೆ, ಶಿವಪ್ಪ ಮಾಳಗೆ, ಬಾಳಾಸಾಹೇಬ ಬಸಣ್ಣವರ, ಡಾ.ಶಂಕರ ಮಾಳಿ, ವಿದ್ಯಾಧರ ಅಮನವರ, ಭಾವುಸಾಬ ಪಾಟೀಲ, ವಿಜಯಕುಮಾರ ಶಿಂಗೆ, ಜಾರ ಮುಜಾವರ ಉಪಸ್ಥಿತರಿದ್ದರು.