ಬೋರಗಾಂವ ಅರಿಹಂತ ಸೊಸೈಟಿ ಮಾದರಿ

22Brg1
Published on

ಬೋರಗಾಂವ: ದಿ.ರಾವಸಾಹೇಬ ಪಾಟೀಲ ಅವರ ಮಾರ್ಗದರ್ಶನದಲ್ಲಿನ ಬೋರಗಾಂವ ಶ್ರೀಅರಿಹಂತ ಕೋ-ಆಫ್ ಕ್ರೆಡಿಟ್ ಸೊಸೈಟಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 60 ಶಾಖೆಗಳ ಮೂಲಕ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿ ಮಾದರಿಯಾಗಿದೆ ಎಂದು ಮಹಾರಾಷ್ಟ್ರದ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರೀಫ್ ಹೇಳಿದರು.

ಸಮೀಪದ ಕಾಗಲ (ಮಹಾರಾಷ್ಟ್ರ) ಪಟ್ಟಣದಲ್ಲಿ ಶ್ರೀ ಅರಿಹಂತ ಕೋ-ಆಫ್ ಸೊಸೈಟಿ ಲಿ.ಬೋರಗಾಂವ ಮಲ್ಟಿಸ್ಟೇಟ್‌ನ 60ನೇ ಶಾಖೆ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಚೇರ್ಮನ್ ಅಭಿನಂದನ ಪಾಟೀಲ ಮಾತನಾಡಿ, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಅರಿಹಂತ ಸಂಸ್ಥೆಯು ಸದಸ್ಯರಿಗೆ ವಿವಿಧ ಠೇವಣಿ ಯೋಜನೆ ನೀಡಿದೆ. 1,202 ಕೋಟಿ ರೂ. ಠೇವಣಿ, ರೈತರು, 997 ಕೋಟಿ ರೂ. ಸಾಲ ವಿತರಣೆ, 216 ಕೋಟಿ ರೂ. ಹೂಡಿಕೆಯೊಂದಿಗೆ 59 ಶಾಖೆಗಳು ಮೂಲಕ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ 60 ಶಾಖೆ ಆರಂಭಿಸಿದೆ. ಶಾಖೆಯ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಠೇವಣಿ ರಸೀದಿ ವಿತರಣೆ, ಸೇಫ್ ಲಾಕರ್‌ಗಳನ್ನು ಗಣ್ಯರು ಉದ್ಘಾಟಿಸಿದರು. ಯುವ ಮುಖಂಡರಾದ ಉತ್ತಮ ಪಾಟೀಲ, ನವೀದ್ ಮುಶ್ರೀಫ್, ಯುವರಾಜ ಪಾಟೀಲ, ಭೈಯ್ಯ ಮಾನೆ, ರಮೇಶ ತೊಡಕರ, ಸೌರಭ ಪಾಟೀಲ, ಸಮ್ಮೇದ್ ಮುರಗುಡೆ, ಸಂಗ್ರಾಮ ಗುರವ, ಅಣ್ಣಾಸಾಹೇಬ ಅಥಣೆ, ಅತುಲ ಕಟಗೆ, ಅಕ್ಷಯ ಕಟಗೆ, ಅಮಿತ ಪಿಷ್ಟೆ, ಪ್ರಕಾಶ ಜಕಾತೆ, ಬಾಬಾಸೋ ನಾಯಿಕ, ವಿವೇಕ ಲವಟೆ, ಯಶವಂತ ಗುರವ, ಸಂದೀಪ ಕಲಾಂಕರ, ಸುಹಾಸ ದುಗೆ, ಸುನೀಲ ಮಾಳಿ, ಸಂಸ್ಥೆಯ ಸಿಇಒ ಅಶೋಕ ಬಂಕಾಪುರೆ, ಸುಶಾಂತ ದುರ್ಗೆ, ಚಂದ್ರಕಾಂತ ಗುರವ ಇತರರಿದ್ದರು. ಶಾಖಾಧಿಕಾರಿ ಶ್ರೀಧರ ಪಾಟೀಲ ವಂದಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net