

ಸಿಂಧನೂರು: ತಾಲೂಕಿನ ಐದು ಕೇಂದ್ರಗಳಲ್ಲಿ ಸೋಮವಾರ ಮತದಾನ ನಡೆಯಿತು.
ನಗರದ ತಹಸಿಲ್ ಕಚೇರಿಯಲ್ಲಿ ಎರಡು ಬೂತ್, ತಾಪಂ ಕಚೇರಿ, ತುರ್ವಿಹಾಳ, ಜವಳಗೇರಾದಲ್ಲಿ ಬೆಳಗ್ಗೆಯಿಂದಲೇ ಪದವೀಧರರು ಮತ ಚಲಾಯಿಸಿದರು. ಗ್ರಾಮೀಣ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಕೆಲವು ಪದವೀಧರರು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಬೂತ್‌ನಿಂದ ಹಿಂದಿರುಗಿದರು. ಮತಗಟ್ಟೆಗಳ ಹೊರಗೆ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ಮತಯಾಚಿಸಿದರು. ಮಧ್ಯಾಹ್ನ 3 ಗಂಟೆವರೆಗೆ ಶೇ.45 ಮತದಾನವಾಗಿತ್ತು. ಒಟ್ಟು ಶೇ.67.64 ಮತದಾನವಾಗಿದೆ. 4089 ಮತಗಳ ಪೈಕಿ 2766 ಮತಗಳು ಚಲಾವಣೆಗೊಂಡಿವೆ.
ತಹಸಿಲ್ ಕಚೇರಿ ಮತಗಟ್ಟೆಯಲ್ಲಿ ಶೇ.62.04, ನ್ಯಾಯಾಲಯ ಕೊಠಡಿ ಮತಗಟ್ಟೆಯಲ್ಲಿ ಶೇ.70.95, ತಾಪಂ ಕಚೇರಿಯಲ್ಲಿ ಶೇ.65.63, ತುರ್ವಿಹಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೇ.75.51, ಜವಳಗೇರಾ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶೇ.72.51 ಮತದಾನವಾಗಿದೆ.