ಬೂತ್ ಅಧ್ಯಕ್ಷರು ಬಿಜೆಪಿಯ ಜೀವಾಳ

ಪದಾಧಿಕಾರಿಗಳ ನೇಮಕ
ಆಲೂರು ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲಿರುವ ಬೂತ್‌ಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಶಾಸಕ ಸಿಮೆಂಟ್ ಮಂಜು, ಆಲೂರು ಕಟ್ಟಾಯ ಮಂಡಲದ ಅಧ್ಯಕ್ಷೆ ಉಮಾ ರವಿಪ್ರಕಾಶ್ ಇತರರು ಇದ್ದರು.
Published on

ಆಲೂರು: ರಾಜ್ಯದ ಪ್ರತಿಯೊಂದು ಬೂತ್ ಅಧ್ಯಕ್ಷರು ಕೂಡ ಬಿಜೆಪಿಯ ಜೀವಾಳ. ಈ ನಿಟ್ಟಿನಲ್ಲಿ ಪಕ್ಷದ ಎಲ್ಲ ಬೂತ್‌ಗಳನ್ನು ಬಲಪಡಿಸಲು ಆದ್ಯತೆ ನೀಡುವುದಾಗಿ ಶಾಸಕ ಸಿಮೆಂಟ್ ಮಂಜು ಹೇಳಿದರು.

ಮಂಗಳವಾರ ತಾಲೂಕಿನ ಪಾಳ್ಯ ಹೋಬಳಿ ಮಡಬಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೂತ್‌ಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಮಾತನಾಡಿದರು.

ಪ್ರತಿ ಬೂತ್ ಕೂಡ ಪ್ರಮುಖ ಮತ್ತು ಪಕ್ಷದ ಜೀವಾಳ ಎಂಬುದು ಕೇಂದ್ರ ಗೃಹ ಸಚಿವ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕಲ್ಪನೆ ಮತ್ತು ಚಿಂತನೆಯಾಗಿದೆ. ಅವರ ಚಿಂತನೆಯಂತೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲಾಗುತ್ತಿದೆ. ಪಕ್ಷದ ರಾಷ್ಟ್ರೀಯ ನಾಯಕರು ಬೂತ್ ಅಧ್ಯಕ್ಷರಾಗಿ ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ಬಿಜೆಪಿ, ರಾಷ್ಟ್ರೀಯ ಅಧ್ಯಕ್ಷರಂತೆ ಬೂತ್ ಅಧ್ಯಕ್ಷರನ್ನೂ ಗೌರವದಿಂದ ಕಾಣುತ್ತದೆ. ಇದೇ ಬಿಜೆಪಿಯ ವಿಶೇಷತೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಡಬಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಟ್ಟು 7 ಬೂತ್‌ಗಳಿಗೆ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಯಿತು. ಬೆಳಮೆ ಬೂತ್ ಅಧ್ಯಕ್ಷರಾಗಿ ಸಂಪತ್, ಕಾರ್ಯದರ್ಶಿ-ಬಿ.ಸಿ.ದುಷ್ಯಂತ್. ಕಲಾಪುರ ಬೂತ್ ಅಧ್ಯಕ್ಷ-ವೇದರಾಜು , ಕಾರ್ಯದರ್ಶಿ-ಕೆ.ಪಿ.ಹರೀಶ್. ಕಾರ್ಜುವಳ್ಳಿ ಬೂತ್ ಅಧ್ಯಕ್ಷ-ಪ್ರದೀಪ್, ಕಾರ್ಯದರ್ಶಿ- ಕೆ.ಪಿ.ಮಲ್ಲೇಶ್. ಕಾಮತಿ ಬೂತ್ ಅಧ್ಯಕ್ಷ-ಪುನೀತ್, ಕಾರ್ಯದರ್ಶಿ-ಮಂಜುನಾಥ್, ಬೆಳ್ಳೂರು ಬೂತ್ ಅಧ್ಯಕ್ಷ-ಬಿ.ಎಸ್.ದೇವರಾಜ್, ಕಾರ್ಯದರ್ಶಿ-ಮಂಜುನಾಥ್, ಹೆದ್ದುರ್ಗ ಬೂತ್ ಅಧ್ಯಕ್ಷ-ನಂದೀಶ್, ಕಾರ್ಯದರ್ಶಿ-ಹರೀಶ್, ಮಡಬಲು ಬೂತ್ ಅಧ್ಯಕ್ಷ- ನಿಜಲಿಂಗಯ್ಯ, ಕಾರ್ಯದರ್ಶಿಯಾಗಿ ಮಂಜೇಗೌಡ ಅವರನ್ನು ನೇಮಕ ಮಾಡಲಯಿತು.

ತಾಲೂಕು ಬಿಜೆಪಿ ಅಧ್ಯಕ್ಷೆ ಉಮಾ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ಕಾಂತರಾಜ್, ಸಂದೀಪ್, ಹುಲ್ಲಹಳ್ಳಿ ಆನಂದ್ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು, ಬೂತ್ ಮಟ್ಟದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net