ಹೊರ ನಡೆದ ಬೂತ್ ಏಜೆಂಟ್

Fake voted
Published on

ಹೊಳೆನರಸೀಪುರ : ಕೆಲವರು ನಕಲಿ ಮತದಾನ ಮಾಡಿದ್ದಾರೆ ಎಂದು ಆರೋಪಿಸಿ ಮತದಾನ ಕೇಂದ್ರದಿಂದ ಬೂತ್ ಏಜೆಂಟ್ ಒಬ್ಬರು ಎಂಬವರು ಹೊರನಡೆದ ಘಟನೆ ಶುಕ್ರವಾರ ನಡೆದಿದೆ. ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 251 ರಲ್ಲಿ ಶಾಸಕ ಎಚ್.ಡಿ.ರೇವಣ್ಣ ಹಕ್ಕು ಚಲಾವಣೆಗೆ ಆಗಮಿಸುವ ಸಂದರ್ಭ ಮತಗಟ್ಟೆ ಅಧಿಕಾರಿಯೊಂದಿಗೆ ಕಾಂಗ್ರೆಸ್ ಪಕ್ಷದ ಏಜೆಂಟ್ ರಾಘವೇಂದ್ರ ಎಂಬವರು ವಾಗ್ವಾದ ಆರಂಭಿಸಿದರು. ಮತಗಟ್ಟೆ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಸಮಾಧಾನಗೊಳ್ಳದ ಅವರು ಬೂತ್ ನಿಂದ ಹೊರ ನಡೆದು ಆಕ್ರೋಶ ಹೊರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net