

ಮಂಗಳೂರು: ನಗರದ ಬೋಳೂರಿನ ಮನೆಯೊಂದಕ್ಕೆ ಅಕ್ರಮ ಪ್ರವೇಶ ಮಾಡಿದ ಕಿಡಿಗೇಡಿಗಳು ಮನೆಯ ಸೊತ್ತುಗಳಿಗೆ ಹಾನಿಗೈದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರತ್ನಾಕರ ಪುತ್ರನ್ ಎಂಬವರು ಮಗಳ ಮನೆಯಲ್ಲಿದ್ದು, ಸ್ವಂತ ಮನೆಯಾದ ಬೋಳೂರಿನ ಹಿಂದೂಸ್ಥಾನ್ ್ಯಾಕ್ಟರಿ ಬಳಿಯಿರುವ ಮನೆಗೆ ಪ್ರತಿದಿನ ಬಂದು ಮನೆಯನ್ನು ಸ್ವಚ್ಚ ಮಾಡಿ ಬೀಗ ಹಾಕಿಕೊಂಡು ಹೋಗುತ್ತಿದ್ದರು. ಸೆ.28ರಂದು ಸಂಜೆ 6 ಗಂಟೆಗೆ ಮನೆಗೆ ಬೀಗ ಹಾಕಿ ಅವರ ಮಗಳ ಮನೆಯಿರುವ ಅಶೋಕನಗರಕ್ಕೆ ಹೋಗಿದ್ದಾರೆ. ಸಂಜೆ 7 ಗಂಟೆಗೆ ಸ್ಥಳೀಯರು ಮನೆ ಇನ್‌ವರ್ಟರ್ ಹೊರಗೆ ಬಿದ್ದಿರುವ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಸ್ವಂತ ಮನೆಗೆ ಬಂದು ನೋಡಿದಾಗ ಯಾರೋ ಕೀಡಿಗೇಡಿಗಳು ಮನೆಯ ಬಾಗಿಲನ್ನು ಯಾವುದೋ ಸಾಮಾಗ್ರಿಯಿಂದ ಮನೆಯ ಬಾಗಿಲಿನ ಬೀಗವನ್ನು ಒಡೆದು ಮನೆಯ ಒಳಗೆ ಪ್ರವೇಶಿಸಿ ಟಿ.ವಿ, ಗಡಿಯಾರ, ದಿನ ಬಳಕೆಯ ವಸ್ತುಗಳಾದ ಗಾಜಿನ ಗ್ಲಾಸ್‌ಗಳನ್ನು ಹುಡಿ ಮಾಡಿ 30,000 ರೂ. ನಷ್ಟ ಉಂಟು ಮಾಡಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.