

ಕುಂದಗೋಳ: ತಾಲೂಕಿನ ಯರೇಬೂದಿಹಾಳ ಪಂಚಾಯಿತಿ ವತಿಯಿಂದ 15ನೇ ಹಣಕಾಸು ಯೋಜನೆಯಡಿ 20 ಸಾವಿರ ಮೌಲ್ಯದ ಪುಸ್ತಕಗಳನ್ನು ಗ್ರಾಮದ ಗ್ರಂಥಾಲಯಕ್ಕೆ ಬುಧವಾರ ಕೊಡುಗೆಯಾಗಿ ನೀಡಲಾಯಿತು.
ಗ್ರಂಥಪಾಲಕ ಮಹಾಂತೇಶ ಡೊಳ್ಳಿನ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದ ಕನಸು ನನಸಾಗಿಸಿಕೊಳ್ಳಲು ಅವರಿಗೆ ಉತ್ತಮ ತರಬೇತಿ ಮತ್ತು ಪುಸ್ತಕದ ಅವಶ್ಯಕತೆ ಇರುತ್ತದೆ. ಇದನ್ನು ಅರಿತು ಯರೇಬೂದಿಹಾಳ ಗ್ರಾಮ ಪಂಚಾಯಿತಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುಸ್ತಕಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜವ್ವ ಬೂದುಗಣ್ಣವರ, ಉಪಾಧ್ಯಕ್ಷೆ ರತ್ನವ್ವ ಕರಡಿ, ಪಿಡಿಒ ಎಂ.ಎ. ಚಕ್ಕೊಲಿ, ಮಹದೇವಪ್ಪ ಪೂಜಾರ, ಬಸವರಾಜ ಕಂಡಾರಿ, ನಿರ್ಮಲಾ ಎಲುವಿಗಿ, ನೀಲವ್ವ ತಳವಾರ, ಮಮತಾಜಾಬಿ ಹಗೇದ, ಗಂಗವ್ವ ಮ್ಯಾಗೇರಿ, ಹುಸೇನಸಾಬ ಹಾಳಳ್ಳ, ನಿಂಗಪ್ಪ ಕಾರಡಗಿ, ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.