ಅಧರ್ಮದ ಕಾರ್ಯಗಳಿಗೆ ಅಜ್ಞಾನವೇ ಕಾರಣ, ಸನಾ ಕಾಲೇಜಿನಲ್ಲಿ ಗ್ರಂಥಗಳ ಲೋಕಾರ್ಪಣೆ

IMG_20240217_172512_971-1.jpg
Published on

ಹುಬ್ಬಳ್ಳಿ: ಕೆಲವರ ಅಜ್ಞಾನದಿಂದಾಗಿ ಇಂದು ಅನೇಕ ಧರ್ಮಗಳಲ್ಲಿ ಅಧರ್ಮದ ಕಾರ್ಯಗಳು ನಡೆಯುತ್ತಿವೆ, ದೇವರು, ಧರ್ಮದ ಬಗ್ಗೆ ಯಾರು ಸರಿಯಾಗಿ ತಿಳಿದುಕೊಂಡಿರುತ್ತಾರೋ ಅವರೇ ನಿಜವಾದ ಧರ್ಮ ಪಾಲಕರು ಎಂದು ಬಾಗಲಕೋಟೆ ಜಿಲ್ಲೆ ಶಿರೂರಿನ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಹಾಗೂ ಮಹಾಂತ ತೀರ್ಥದ ಡಾ. ಬಸವಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿಯ ಭೈರಿದೇವರಕೊಪ್ಪದ ಸನಾ ಮಹ್ಮದ ಹುಸೇನ ಮಳಗಿ ಚಾರಿಟಬಲ್ ೌಂಡೇಷನ್ ಮತ್ತು ಬಸವ ಕೇಂದ್ರದ ಆಶ್ರಯದಲ್ಲಿ ಸನಾ ಎಜುಕೇಶನಲ್ ಕ್ಯಾಂಪಸ್ನಲ್ಲಿ ಶನಿವಾರ ಏರ್ಪಡಿಸಿದ್ದ ಗ್ರಂಥಗಳ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸತ್ಯ, ಪ್ರೇಮ, ಜ್ಞಾನ ಎಲ್ಲಿದೆಯೋ ಅಲ್ಲಿಯೇ ದೇವರು ನೆಲೆಸುತ್ತಾನೆ. ಸಮಾಜದ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕೆಂದು ಸನಾ ಎಜುಕೇಶನ್ ಸಂಸ್ಥೆಯು ಕೈಗೊಂಡಿರುವ ಸೇವಾ ಕಾರ್ಯಗಳಲ್ಲಿಯೂ ದೇವರಿದ್ದಾನೆ ಎಂದು ಬಣ್ಣಿಸಿದರು.

ಮಂಗಳೂರಿನ ಶಾಂತಿ ಪ್ರಕಾಶನ ವ್ಯವಸ್ಥಾಪಕ ಮಹಮ್ಮದ ಕುಂಞ ಮಾತನಾಡಿ, ಪ್ರವಾದಿಗಳು, ಸಂತರು, ದಾರ್ಶನಿಕರು ಸಮಾಜದಲ್ಲಿ ಜನರನ್ನು ಜೋಡಿಸಲು ಅವತರಿಸಿದವರು. ಆದರೆ, ಇಂದು ಅನೇಕ ಜನರು ದ್ವೇಷ ಭಾಷಣ ಮಾಡುವುದರಲ್ಲಿ ಸ್ಪರ್ಧೆಗೆ ಇಳಿದವರಂತೆ ವತಿರ್ಸುತ್ತಿದ್ದಾರೆ. ಆ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಧರ್ಮದ ಹೆಸರಲ್ಲಿ ಅಧರ್ಮದ ಕೆಲಸಗಳಾಗಬಾರದು. ಧರ್ಮ ಎಂದರೆ ಬೆಳಕು ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.

ಬಸವ ಕೇಂದ್ರದ ಅಧ್ಯಕ್ಷ ಪ್ರೊ. ಜಿ.ಬಿ. ಹಳ್ಯಾಳ ಮಾತನಾಡಿ, ಸಮಾಜದಲ್ಲಿ ಸೌಹಾರ್ದ ಕಡಿಮೆಯಾಗುತ್ತಿರುವುದಕ್ಕೆ ಅಜ್ಞಾನವೇ ಕಾರಣ. ಧರ್ಮ ಎಂದರೆ ಎಲ್ಲರನ್ನೂ ಒಗ್ಗೂಡಿಸುವುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸನಾ ಎಜುಕೇಶನಲ್ ಚಾರಿಟಬಲ್ ಟ್ರಸ್ಟ್ ಚೇರ್ಮನ್ ಎಂ.ಎಂ. ಮಳಗಿ ಮಾತನಾಡಿ, ವಚನ ಸಾಹಿತ್ಯವು ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತ್ಯವಾಗಿದೆ. ಸಮಾಜದಲ್ಲಿ ಮನೆ ಮಾಡಿರುವ ದ್ವೇಷ ಭಾವನೆ ದೂರ ಮಾಡಲು ಐದು ಗ್ರಂಥಗಳನ್ನು ಮನೆಮನೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲ ಸಮಾಜದವರನ್ನು ಒಂದೆಡೆ ಸೇರಿಸಬೇಕು. ತಪು$್ಪ ಕಲ್ಪನೆಗಳನ್ನು ಹೋಗಲಾಡಿಸಬೇಕು ಎಂದು ಹೇಳಿದರು.

ಸನಾ ಮನ್ಸೂರಿ ಎಜುಕೇರ್ ಅಕಾಡೆಮಿಗೆ ಜಾಗ ದಾನ ನೀಡಿದ ಜಮಖಂಡಿಯ ಸ್ತ್ರೀರೋಗ ತಜ್ಞೆ ಡಾ. ಮೆಹರುನ್ನಿಸಾ ಮನ್ಸೂರಿ ಮಾತನಾಡಿ, ಬಡ ಪ್ರತಿಭಾವಂತ ಮಕ್ಕಳ ಭವಿಷ್ಯ ರೂಪಿಸಲು ಸಹಾಯವಾಗಲಿ ಎಂಬುದು ನನ್ನ ಆಶಯ ಎಂದರು.

ಗ್ರಂಥ ಲೋಕಾರ್ಪಣೆ: ಬಸವ ಭಕ್ತಿ ವಚನಗಳು, ಬಸವ ತತ್ವ ಹಾಗೂ ಇಸ್ಲಾಂ, ಇಸ್ಲಾಂ ಮತ್ತು ಪರಧರ್ಮ ಸಹಿಷ್ಣುತೆ, ಕುರಾನ್ ಪರಿಚಯ ಹಾಗೂ ಮುಹ್ಮದ್ ಪೈಗಂಬರ& ಜಗತ್ತು ಕಂಡ ಅದ್ಭುತ ವ್ಯಕ್ತಿ ಈ ಐದು ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು.

ಸನಾ ಮನ್ಸೂರಿ ಎಜಕೇರ್ ಅಕಾಡೆಮಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕಾರ್ ರೀದ್ ಅಲಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಹ್ಮದ ಖಾಲಿದ್, ದ್ಯಾವಪ್ಪನವರ, ವಳಸಂಗ, ಎಸ್.ಎಂ. ಹುಡೇದ, ಅಶ್ರ ಅಲಿ, ಖಾಲಿದ್ ಮಳಗಿ, ಎಸ್.ಬಿ. ಸಿಂಧಗಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net