

ಚನ್ನಮ್ಮನ ಕಿತ್ತೂರು: ಸರ್ಕಾರದಿಂದ ನೀಡಲಾದ 4500 ಪುಸ್ತಕಗಳನ್ನು ಗ್ರಂಥಾಲಯಗಳಿಗೆ ನೀಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಸದುಪಯೋಗ ಪಡೆಯಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ತಾಪಂ ಆವರಣದಲ್ಲಿ ಗ್ರಾಪಂನ ಡಿಜಿಟಲ್ ಗ್ರಂಥಾಲಯಗಳಿಗೆ ಭಾನುವಾರ ಪುಸ್ತಕ ವಿತರಣೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನೂಕೂಲವಾಗಲು ಸರ್ಕಾರದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಹಾಗೂ ವಿವಿಧ ಬಗೆಯ ಕಥೆ ಕಾದಂಬರಿ ಪುಸ್ತಕಗಳು ನೀಡಲಾಗಿದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮೂಲಕ ಹೆಚ್ಚಿನ ಜ್ಞಾನ ಪಡೆಯಬೇಕು ಎಂದರು.
ತಾಪಂ ಇಒ ಕಿರಣ ಘೋರ್ಪಡೆ, ಸಹಾಯಕ ನಿರ್ದೇಶಕ ಸುರೇಶ ನಾಗೋಜಿ, ಸಹಾಯಕ ಲೆಕ್ಕಾಧಿಕಾರಿ ಈರಣ್ಣ ಕಮ್ಮಾರ ಹಾಗೂ ತಾಪಂ ಸಿಬ್ಬಂದಿ, ತಾಲೂಕಿನ ಗ್ರಂಥಪಾಲಕರು ಇದ್ದರು.