ಕನ್ನಡ ಮಾಧ್ಯಮ ಕಲಿಕೆಯಿಂದಲೂ ಉನ್ನತ ಸ್ಥಾನ : ಪುರುಷೋತ್ತಮ ರೈ ಹೇಳಿಕೆ

book
ಕುರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಯಮಿ ಬೂಡಿಯಾರ್ ಪುರುಷೋತ್ತಮ ರೈ ಬರೆಯುವ ಪುಸ್ತಕ ವಿತರಿಸಿದರು.
Published on

ಪುತ್ತೂರು ಗ್ರಾಮಾಂತರ: ಕನ್ನಡ ಮಾಧ್ಯಮದಲ್ಲಿ ಕಲಿತು ಉನ್ನತ ಸ್ಥಾನ ಪಡೆದವರು ಹಲವಾರು ಮಂದಿ ಇದ್ದಾರೆ. ಕನ್ನಡ ಶಾಲೆಗಳು ಉಳಿಯಬೇಕಾದರೆ ಶಾಲೆಗಳ ಅಭಿವೃದ್ಧಿ ವಿಚಾರದಲ್ಲಿ ಪಾಲಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಉದ್ಯಮಿ, ಆರ್ಯಾಪು ಗ್ರಾಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಹೇಳಿದರು.

ಕುರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77 ಮಂದಿ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕ ಮತ್ತು ಕೊಡೆ ವಿತರಿಸಿ ಮಾತನಾಡಿದರು.

ಕುರಿಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾ.ಪಂ ಸದಸ್ಯರಾದ ನಾಗೇಶ್ ಮತ್ತು ಕಲಾವತಿ ಮಾತನಾಡಿದರು. ಶಾಲಾ ಶಿಕ್ಷಕಿ ದಿವ್ಯಜೋತಿ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ನವೀನ್ ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ರಮ್ಯಾ ವಂದಿಸಿದರು. ಶಿಕ್ಷಕಿ ಕವಿತಾ ಕಾರ್ಯಕ್ರಮ ನಿರೂಪಿಸಿದರು.

ಪುಸ್ತಕ-ಕೊಡೆ ಕೊಡುಗೆ

ಆರ್ಯಾಪು ಗ್ರಾಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ತನ್ನ ಸಹೋದರ ಮಾಧವ ರೈ ಅವರ 50ನೇ ಪುಣ್ಯ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಬರೆಯುವ ಪುಸ್ತಕ ಕೊಡುಗೆ ನೀಡಿದರು. ಆರ್ಯಾಪು ಗ್ರಾಪಂ ಸದಸ್ಯ ನಾಗೇಶ್ ಕೊಡೆ ಕೊಡುಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net