ಅಕ್ಕಿಮರಡಿಯಲ್ಲಿ ಪುಸ್ತಕಾವಲೋಕನ, ಮನದ ಮೈಲಿಗೆ ತೊಳೆಯಲು ಅನುಭಾವ ಬೇಕು

Book review in Akkimaradi, experience is needed to wash the mind's soul
Published on

ರಬಕವಿ&ಬನಹಟ್ಟಿ:ಅನುಭಾವ ಎಂಬುದು ಗಹನವಾದದ್ದು. ಅದು ಶಿಶು ಕಂಡ ಕನಸು. ಅಂತರಂಗದ ರತ್ನ. ಮನದ ಮೈಲಿಗೆ ತೊಳೆಯಲು ಅನುಭಾವ ಬೇಕು. ಅದುವೇ ಅನುಭೂತಿ ಎನಿಸುವುದು ಎಂದು ರಬಕವಿಯ ಇಂದೂಧರ ಬೆಳಗಲಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲೂಕು ಟಕ, ಮಹಾಲಿಂಗಪುರ ವಲಯ ಟಕದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ&46 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಓಂಕಾರದಿಂದ ಆರಂಭವಾಗಿ ಯೋಗ, ಜಪ, ತಪ, ಪೂಜೆ, ಪ್ರಾರ್ಥನೆ, ಷಟ್​ಸ್ಥಲ, ಅಷ್ಟಾವರಣ, ಪಂಚಾಚಾರ, ಪಂಚೀಕರಣ ಹೀಗೆ ಶೂನ್ಯದವರೆಗೆ ಪರಾಮರ್ಶಿಸಿದ ಮಲ್ಲಿಕಾರ್ಜುನ ಯಾಳವಾರ ಅವರ ವಿಶಿಷ್ಟ ಕೃತಿಯೇ ದಿವ್ಯಾನುಭೂತಿ ಎಂದರು.ಜಾನಪದ ಸಾಹಿತಿ ರಾಮಣ್ಣ ಕೊಣ್ಣೂರ, ಕಸಾಪ ರಬಕವಿ&ಬನಹಟ್ಟಿ ತಾಲೂಕು ಅಧ್ಯ ಮ.ಕೃ. ಮೇಗಾಡಿ, ಹಿರಿಯ ಸಾಹಿತಿ ಶಿವಾನಂದ ದಾಶಾಳ, ನಿವೃತ್ತ ಅರ್ಥಶಾಸ ಉಪನ್ಯಾಸಕ ಎಂ.ಎಸ್​. ಬದಾಮಿ, ನಾವಲಗಿ ಗ್ರಾ.ಪಂ. ಸದಸ್ಯ ದಾನಪ್ಪ ಆಸಂಗಿ, ಮಲ್ಲೇಶಪ್ಪ ಕುಚನೂರ, ಜಾನಪದ ಕಲಾವಿದ ಪರಮಾನಂದ ಸನದಿ ಸಂವಾದದಲ್ಲಿ ಮಾತನಾಡಿದರು.

ವಿಜಯಲಕ್ಷಿ$್ಮ ಬೆಳಗಲಿ ಭಕ್ತೀಗಿತೆ ಹಾಡಿದರು. ಹಿರಿಯ ಸಾಹಿತಿ ಜಿ.ಎಸ್​. ವಡಗಾವಿ, ಯಶವಂತ ವಾಜಂತ್ರಿ, ಮೃತ್ಯುಂಜಯ ರಾಮದುರ್ಗ, ಮಹಾಲಿಂಗಪುರ ರನ್ನ ವಿಚಾರ ವೇದಿಕೆ ಅಧ್ಯ ಗುರುರಾಜ ಖಾಸನೀಸ, ಕಸಾಪ ಕಾರ್ಯದರ್ಶಿ ಶ್ರೀಶೈಲ ಬುರ್ಲಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸವರಾಜ ದುಂಬಾಳೆ, ಗೌರಿ ಮಿಳ್ಳಿ, ಶಕುಂತಲಾ ತೇರದಾಳ, ಸುವರ್ಣ ಕೊಪ್ಪದ ಇದ್ದರು.ಮಹಾಂತೇಶ ಮುರಗೋಡ ಪ್ರಾರ್ಥಿಸಿದರು. ಬಸವರಾಜ ಮೇಟಿ ಸ್ವಾಗತಿಸಿದರು. ವಿಜಯಕುಮಾರ ಮಾಳಿ ನಿರೂಪಿಸಿದರು. ರಾಜೇಶ ನೋಟದ ವಂದಿಸಿದರು.

ರಬಕವಿ ಬನಹಟ್ಟಿ ಅಕ್ಕಿಮರಡಿಯ ತೋಟದ ಮನೆಯಲ್ಲಿ ಪುಸ್ತಕಾವಲೋಕನ&46 ಕಾರ್ಯಕ್ರಮದಲ್ಲಿ ಇಂದೂಧರ ಬೆಳಗಲಿ ಮಾತನಾಡಿದರು. ಮ.ಕೃ. ಮೇಗಾಡಿ, ರಾಮಣ್ಣ ಕೊಣ್ಣೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net