ಮುತ್ತಿನ ಕಣಜ ಕೃತಿ ಬಿಡುಗಡೆ

photo 1
Published on

ನಂಜನಗೂಡು : ಸಾಹಿತ್ಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಳಲೆ ಜವರ ನಾಯಕ ‘ಮುತ್ತಿನ ಕಣಜ’ ಕೃತಿ ಮೂಲಕ ಚಿಂತನೆಗಳ ಭಂಡಾರವನ್ನು ತೆರೆದು ಇಟ್ಟಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ ಹೇಳಿದರು. ನಗರದ ಗೌರಿಘಟ್ಟದ ಬೀದಿಯಲ್ಲಿರುವ ನಾಯಕ ಸಮುದಾಯ ಭವನದಲ್ಲಿ ಭಾನುವಾರ ಸಾಹಿತಿ ಕಳಲೆ ಜವರನಾಯಕ ಅವರ ಮುತ್ತಿನ ಕಣಜ, ಮತ್ತು ಜನರಲ್ ಇಂಗ್ಲಿಷ್ ಎಂಬ ಸ್ಪರ್ಧಾತ್ಮಕ ಕೈಪಿಡಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜವರ ನಾಯಕ ಅವರ ಸೃಜನಶೀಲತೆ ಈ ಕೃತಿಯಲ್ಲಿ ಅನಾವರಣಗೊಂಡಿದೆ ಎಂದವರು ಹೇಳಿದರು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಮುತ್ತಿನ ಕಣಜವು ಸಮಾಜಮುಖಿ ಚಿಂತನೆಗಳನ್ನು ಹೊಮ್ಮಿಸಿದೆ. ಹಲವರಿಗೆ ಇದು ಮೌಲ್ಯ ಕಲಿಕೆಗೆ ಪ್ರೇರೇಪಣೆ, ಮಾರ್ಗ ದರ್ಶನ ತೋರುವ ಅಂಶಗಳನ್ನು ಒಳಗೊಂಡಿದೆ ಎಂದರು.
ಕಾಂಪೋಸ್ಟ್ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಅಧ್ಯಕ್ಷತೆ ವಹಿಸಿದ್ದರು. ರಂಗ ಕರ್ಮಿ ಸಿ.ಎಂ.ನರಸಿಂಹಮೂರ್ತಿ, ವಿವಿಧ ಸಂಘ ಸಂಸ್ಥೆ ಪ್ರಮುಖರಾದ ಡಿ.ಮಹೇಂದ್ರಮೂರ್ತಿ, ಡಾ.ಅಂಬರೀಷ್, ಡಿ.ಜಿ. ಸೋಮಶೇಖರ್, ಬಾಬು ನಾಯಕ್ ಜಯರಾಮ, ಕಾರಯ್ಯ, ಮೀನಾಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net