

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಕವಿ ಕಿರಣ ಜತ್ತಿ ಅವರ ಜೀವನ ಯಾನ ಕೃತಿ ಬಿಡುಗಡೆ ಸಮಾರಂಭವನ್ನು ಅ. 19ರಂದು ಸಂಜೆ 6 ಗಂಟೆಗೆ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ಆಯೋಜಿಸಿದೆ.
ಹಾವೇರಿಯ ಸಾಹಿತಿ ಸತೀಶ ಕುಲಕರ್ಣಿ ಕೃತಿ ಬಿಡುಗಡೆ ಮಾಡುವರು. ಅಂಬಿಕಾ ಹಂಚಾಟೆ ಕೃತಿ ಕುರಿತು ಮಾತನಾಡುವರು. ಧಾರವಾಡದ ಹಿರಿಯ ಕಲಾವಿದ ಬಾಣದ ಮಾರುತಿ, ಬೆಂಗಳೂರು ಲಲಿತ ಕಲಾ ಅಕಾಡೆಮಿ ಸದಸ್ಯ ಕರಿಯಪ್ಪ ಹಂಚಿನಮನಿ ಅತಿಥಿಗಳಾಗಿ ಆಗಮಿಸುವರು. ಲೇಖಕರಾದ ಕಿರಣ ಜತ್ತಿ ಮತ್ತು ಹಾವೇರಿ ಕಲಾ ಬಳಗದ ಎಸ್.ಆರ್. ಹಿರೇಮಠ ಉಪಸ್ಥಿತರಿರುವರು. ಟಿ.ಎಸ್. ಸತ್ಯನ್ ಅವರ ಛಾಯಾಚಿತ್ರಗಳಾಧಾರಿತ ಚಿತ್ರಕಾವ್ಯ ಪ್ರದರ್ಶನ ನಡೆಯಲಿದೆ. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.