

ಹುಬ್ಬಳ್ಳಿ: ನಗರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಸಂತ ಅಗಸಿಮನಿ ಅವರು ಸಂಪಾದಿಸಿ ಹೊರತಂದ ಶರಣರ ದರ್ಶನ ಪುಸ್ತಕವನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗುರುಸಿದ್ದಪ್ಪ ಬಡಿಗೇರ ಅವರು ಬಿಡುಗಡೆಗೊಳಿಸಿದರು.
ಎಸ್.ವಿ. ಬಿದರಳ್ಳಿ, ವೀರೇಶ ಹಂಡಿಗಿ, ಹನುಮಂತ ಹಿರೇಮನಿ, ಮಲ್ಲಿಕಾರ್ಜುನ ಕಮ್ಮಾರ, ಶಿವಾನಂದಯ್ಯ ಹಿರೇಮಠ, ಮಾರುತಿ ಭೋವಿ, ಶಿವನಗೌಡ ಪಾಟೀಲ, ವಿಮಲಾ ಅಗಸಿಮನಿ ಇತರರು ಇದ್ದರು.