ಮನದ ಭಾವ ಹೊರ ಬಂದರೆ ಕಾವ್ಯ

book release program Dr. Satyanand patroti koppal
ಡಾ.ಸತ್ಯಾನಂದ ಪಾತ್ರೋಟ ಅವರ ಜಾಲಿಮರದಲ್ಲೊಂದು ಜಾಜಿಮಲ್ಲಿಗೆ ಆತ್ಮಕಥೆ ಪುಸ್ತಕವನ್ನು ಕೊಪ್ಪಳದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಪ್ರಾಧ್ಯಾಪಕ ಡಾ.ವೈ.ಎಂ.ಭಜಂತ್ರಿ,ಕವಯತ್ರಿ ಮಾಲಾ ಬಡಿಗೇರ, ರಾಜ್ಯೋತ್ಸವ ಪ್ರಶಸ್ತಿ ಪುರಸತ ಸಾಹಿತಿ ಎ.ಎಂ.ಮದರಿ, ಶಕ್ತಿ ಶಾರದೆ ಮೇಳದ ಡಿ.ಎಂ ಬಡಿಗೇರ, ಡಾ.ಸತ್ಯಾನಂದ ಪಾತ್ರೋಟ, ಸಮತಾ ಇದ್ದರು.
Published on

ಕೊಪ್ಪಳ: ಕವಿ ಮನದೊಳಗಿನ ಭಾವ ಹೊರ ಬಂದಾಗಲೇ ನಿಜವಾದ ಕಾವ್ಯ ಹುಟ್ಟುತ್ತದೆ. ಕವಿ&ಕಾವ್ಯದ ಸಂಬಂಧ ತಾಯಿ&ಮಗುವಿನಂತೆ ಎಂದು ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ.ವೈ.ಎಂ.ಭಜಂತ್ರಿ ಅಭಿಪ್ರಾಯಪಟ್ಟರು.

ನಗರದ ತಾಪಂ ಸಭಾಂಗಣದಲ್ಲಿ ಡಾ.ಸತ್ಯಾನಂದ ಪಾತ್ರೋಟ ಆತ್ಮಕಥನ "ಜಾಲಿಮರದಲ್ಲೊಂದು ಜಾಜಿಮಲ್ಲಿಗೆ' ಕೃತಿ ಲೋಕಾರ್ಪಣೆ ಮತ್ತು ಗೀತ ಗಾಯನ, ಕವನ ವಾಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸತ್ಯಾನಂದ ಪಾತ್ರೋಟ ಅವರದಲ್ಲಿ ದಲಿತ ಮತ್ತು ಬಂಡಾಯ ಮನೋಧರ್ಮ ಇದೆ. ಅವರ ಆತ್ಮಕಥೆಯನ್ನು ನಮ್ಮ ಮಕ್ಕಳು ಓದಬೇಕು. ದಲಿತ ಕೇರಿಯಲ್ಲಿಯೇ ಇದನ್ನು ಬಿಡುಗಡೆ ಮಾಡಿದ್ದರೆ ಚೆನ್ನಾಗಿತ್ತು. ಬರೆದು ಕಳೆದುಕೊಂಡವರಲ್ಲಿ ಪಾತ್ರೋಟ ಮೊದಲಿಗರು. ನೇರ, ನಿಷ್ಠೂರವಾದಿ. ಗೆಳೆಯರು ಅವರನ್ನ ದಲಿತ ಸಾಹಿತ್ಯದ ಸಂತ ಎನ್ನುತ್ತಾರೆ ಎಂದರು.

ಕವಯತ್ರಿ ಮಾಲಾ ಬಡಿಗೇರ ಮಾತನಾಡಿ, ಜಾಲಿಮರ ಎನ್ನುವುದು ಒಂದು ಯಾತನೆ. ಈ ದಿಸೆಯಲ್ಲಿ ಡಾ. ಸತ್ಯಾನಂದ ಪಾತ್ರೋಟ ಅವರು ಬಾಲ್ಯದಿಂದಲೂ ಬಹಳ ಯಾತನೆ ಅನುಭವಿಸಿದ್ದಾರೆ. ಅನುಭವಿಸಿದ ನೋವನ್ನು ತಮ್ಮ ಆತ್ಮಕಥನದ ಮೂಲಕ ಹೊರತಂದು ಓದುಗರ ಮನಸ್ಸನ್ನು ತಲುಪಿದ್ದಾರೆ ಎಂದು ತಿಳಿಸಿದರು.

ಕವಿ ರಮೇಶ ಬನ್ನಿಕೊಪ್ಪ, ಶಿಕ್ಷಕಿ ಮಂಜುಳಾ ಶ್ಯಾವಿ ಕವನ ವಾಚಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸತ ಸಾಹಿತಿ ಎ.ಎಂ.ಮದರಿ, ಶಕ್ತಿ ಶಾರದೆ ಮೇಳದ ಡಿ.ಎಂ ಬಡಿಗೇರ, ಡಾ.ಸತ್ಯಾನಂದ ಪಾತ್ರೋಟ, ಸಮತಾ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net