ತಲೆಮಾರಿಗೆ ಪ್ರೇರಣೆಯಾಗುವ ಬರಹ ಬರಲಿ : ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹೇಳಿಕೆ

New Project
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಗಡಿನಾಡು ಕಾಸರಗೋಡಿನ ಸಾಧಕರನ್ನು ಪರಿಚಯಿಸುವ ‘ಕನ್ನಡಿಯಲ್ಲಿ ಕನ್ನಡಿಗರು’ ಕೃತಿ ಸರಣಿಯ ಎರಡು ಸಂಚಿಕೆ ಅರ್ಥಪೂರ್ಣವಾಗಿ ಮೂಡಿಬಂದಿದ್ದು, ಇಂತಹ ಕೃತಿ ಇಂದಿನ ಮತ್ತು ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ತಿಳಿಸಿದ್ದಾರೆ.

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ವತಿಯಿಂದ ಶ್ರೀ ಎಡನೀರು ಮಠದ ಭಾರತೀ ಕಲಾ ಸದನದ ಸಭಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಡಾ.ರಮಾನಂದ ಬನಾರಿ, ಡಾ.ವಸಂತ ಕುಮಾರ ಪೆರ್ಲ ಸಂಪಾದಿತ ಕೃತಿಗಳಾದ ‘ಕನ್ನಡಿಯಲ್ಲಿ ಕನ್ನಡಿಗರು’ ಸರಣಿಯ ಎರಡು ಸಂಚಿಕೆ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ವಿಮರ್ಶಕ ಡಾ.ಸುಭಾಷ್ ಪಟ್ಟಾಜೆ ಮಾತನಾಡಿ, ಸಾಧಕರನ್ನು ಹೊರ ಜಗತ್ತಿಗೆ ಪರಿಚಯಿಸುವ ಈ ಕೃತಿ ಕಾಸರಗೋಡಿನ ಕನ್ನಡಿಗರ ಬಹುಮುಖಿ ಸಾಧನೆ ಪ್ರತಿಬಿಂಬಿಸುವುದರೊಂದಿಗೆ ಅವರ ಸಾಧನೆ ಹೆಗ್ಗುರುತು ದಾಖಲಿಸುವಲ್ಲಿ ಸಂಪಾದಕರಾದ ಡಾ.ರಮಾನಂದ ಬನಾರಿ, ಡಾ.ವಸಂತ ಕುಮಾರ ಪೆರ್ಲ ಯಶಸ್ವಿಯಾಗಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಪರಂಪರೆ ಈ ಕೃತಿಗಳಲ್ಲಿ ಕಾಣಲು ಸಾಧ್ಯ ಎಂದರು.

ಖ್ಯಾತ ಸಂಶೋಧಕ ಪ್ರೊ.ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೊಡಿ ಅಭಿನಂದನಾ ಭಾಷಣ ಮಾಡಿದರು.

ಕೃತಿಗಳ ಸಂಪಾದಕರಾದ ಡಾ.ರಮಾನಂದ ಬನಾರಿ, ಡಾ.ವಸಂತ ಕುಮಾರ್ ಪೆರ್ಲ, ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ಯು.ಮಹೇಶ್ವರಿ, ವೈ.ಸತ್ಯನಾರಾಯಣ, ತಿಲಕನಾಥ ಮಂಜೇಶ್ವರ, ತಿಲಕ್ ಕಾಮತ್, ವಿ.ಬಿ.ಕುಳಮರ್ವ, ಸುಕುಮಾರ ಆಲಂಪಾಡಿ, ಮಲಾರ್ ಜಯರಾಮ ರೈ ಮೊದಲಾದವರಿಗೆ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕೃತಿಗಳನ್ನು ಉಡುಗೊರೆಯಾಗಿ ನೀಡಿದರು.

ಕೃತಿಗಳ ಸಂಯೋಜಕರಾದ ವಿಷ್ಣುಕೀರ್ತಿ ಬನಾರಿ ಮೈಸೂರು, ನಂದಕಿಶೋರ್ ಬನಾರಿ, ಚಂದ್ರಶೇಖರ ಏತಡ್ಕ, ಡಾ.ಮುರಲೀ ಮೋಹನ ಚೂಂತಾರು, ರಾಜೇಂದ್ರ ಕಲ್ಲೂರಾಯ, ವಾಮನರಾವ್ ಬೇಕಲ್, ಬಿ.ಸತ್ಯವತಿ ಎಸ್ ಭಟ್ ಕೊಳಚಪ್ಪು, ಗೋವಿಂದ ಭಟ್, ಹರೀಶ್ಚಂದ್ರ ಮಂಜೇಶ್ವರ, ಡಾ.ಕೆ.ಕೆ.ಶ್ಯಾನುಭೋಗ್ ಮೊದಲಾದವರು ಉಪಸ್ಥಿತರಿದ್ದರು. ಅಂಕಣಗಾರ್ತಿ ವಿಜಯಲಕ್ಷ್ಮೀ ಶ್ಯಾನುಭೋಗ್ ಸ್ವಾಗತಿಸಿದರು. ಕವಯತ್ರಿ ಸುಶೀಲಾ ಪದ್ಯಾಣ ಕಾರ್ಯಕ್ರಮ ನಿರೂಪಿಸಿದರು. ಲೇಖಕರ ಸಂಘದ ಕೋಶಾಧಿಕಾರಿ ವಿಶಾಲಾಕ್ಷ ಪುತ್ರಕಳ ವಂದಿಸಿದರು. ಆಗಮ ಪೆರ್ಲ ಅವರಿಂದ ಕರ್ನಾಟಕ ಶಾಸ್ತ್ರೀಯ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net