ಮೈಸೂರಿನಲ್ಲಿ ಸಿದ್ದರಾಮ್ ರಚನೆಯ ‘ಆಂತರ್ಯ’ ಕೃತಿ ಬಿಡುಗಡೆ

book release program
Published on

ಮೈಸೂರು: ಕಾವಾ ಕಾಲೇಜಿನಲ್ಲಿ ಸೋಮವಾರ ಎಸ್.ಎನ್. ಸಿದ್ದರಾಮ್ ರಚನೆಯ ‘ಆಂತರ್ಯ’ ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಾಹಿತಿ ಸಿ.ಪಿ. ಕೃಷ್ಣಕುಮಾರ್ ಕೃತಿ ಬಿಡುಗಡೆ ಮಾತನಾಡಿ, ಸಿದ್ದರಾಮ್ ಅವರು ಕೃತಿಯಲ್ಲಿ ಗ್ರಾಮೀಣ ಚಿತ್ರಣ ತೆರೆದಿಟ್ಟಿದ್ದಾರೆ. ಕೃತಿಯಲ್ಲಿ ಕಾವ್ಯದ ಜತೆಗೆ ಹಾಗೂ ಕಾವ್ಯಕ್ಕೆ ಪೂರಕವಾದ ಚಿತ್ರಗಳು ಗಮನ ಸೆಳೆಯುತ್ತಿವೆ. ಇಲ್ಲಿನ ಕಾವ್ಯಗಳಿಗೆ ಆಧ್ಯಾತ್ಮಿಕ ಸ್ಪರ್ಶ ಇದೆ. ಕವಿ ಆಶಾವಾದಿಯಾಗಿರಬೇಕು. ಸಿದ್ದರಾಮ ಅವರ ಕವನ ಓದಿದರೆ ಹೊಸ ಆಶಾಭಾವ ಮೂಡಿಸುತ್ತದೆ ಎಂದರು.

ಕವಿಗೆ ವಿನಯ ಇರಬೇಕು, ಆ ಗುಣ ಸಿದ್ದರಾಮ್ ಅವರಲ್ಲಿ ಇದೆ. ಸಿದ್ದರಾಮ ಸಾಹಿತ್ಯದಲ್ಲಿ ಅಂಬೆಗಾಲು ಇಟ್ಟಿದ್ದು, ಅವರು ಸಾಹಿತ್ಯದಲ್ಲಿ ತ್ರಿವಿಕ್ರಮ ಆಗಲಿ ಎಂದು ಆಶಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಸಾಹಿತಿಗಳಾದ ಟಿ. ಸತೀಶ್ ಜವರೇಗೌಡ, ಎಸ್.ಎನ್. ಸಿದ್ದರಾಮ್, ಕಲಾವಿದ ಡಾ.ಡಿ.ಎ. ಉಪಾಧ್ಯ, ಕಲಾವಿದ ಬಾದಲ್ ನಂಜುಂಡಸ್ವಾಮಿ, ಶಿಲ್ಪಿ ಎ.ಆರ್. ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net