ಕಾಸರಗೋಡಿನಲ್ಲಿದೆ ಕನ್ನಡದ ಕಂಪು :ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಅನಿಸಿಕೆ

New Project (43)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಖ್ಯಾತ ಬರಹಗಾರ್ತಿ ಪ್ರಸನ್ನಾ ವಿ.ಚೆಕ್ಕೆಮನೆ ಅವರ ಎರಡು ಹೊಸ ಕೃತಿಗಳ ಬಿಡುಗಡೆ ಸಮಾರಂಭ ಎಡನೀರು ಎದುರ್ತೋಡಿನಲ್ಲಿ ನಡೆಯಿತು. ಪ್ರಸನ್ನಾ ಅವರ 11ನೇ ಕೃತಿ ‘ಬಾನಂಚಿನ ಹೊಸಗಾನ’ ಪುಸ್ತಕವನ್ನು ಭಾರತೀಯ ಭೂ ಸೇನೆಯ ನಿವೃತ್ತ ಕಮಾಂಡೊ ಎಡನೀರು ನಿವಾಸಿ ಶ್ಯಾಮರಾಜ್ ಇ.ವಿ., ಹಾಗೂ 12ನೇ ಕೃತಿ ‘ಪೋಗದೆ ಇರೆಲೋ ರಂಗ...’ವನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಬಿಡುಗಡೆಗೊಳಿಸಿದರು.

ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಮಾತನಾಡಿ, ಕಾಸರಗೋಡು ಎಂದಿಗೂ ಕನ್ನಡದ ಕಂಪು ಹೊಂದಿರುವ ಪ್ರದೇಶವಾಗಿರುವುದು ಇಲ್ಲಿನ ಕನ್ನಡಪರ ಚಟುವಟಿಕೆ ಸಾಬೀತುಪಡಿಸಿದೆ. ಇಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ ಅನೇಕ ಮಹನೀಯರು ಕನ್ನಡ ಭಾಷೆ, ಸಂಸ್ಕೃತಿಗಾಗಿ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಪತ್ರಕರ್ತ ಪ್ರಕಾಶ್ ಇಳಂತಿಲ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ರಮಾ ಎಚ್.ಭಟ್, ಎಡನೀರಿನ ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ, ತಂತ್ರಿವರ್ಯ ಶಂಕರನಾರಾಯಣ ಶರ್ಮಾ ಗೋಸಾಡ, ಪತ್ರಕರ್ತ ಗಂಗಾಧರ್ ತೆಕ್ಕೆಮೂಲೆ, ವೆಂಕಟಕೃಷ್ಣ ಭಟ್, ರಮಾ, ಶುಭ, ರಾಜಶ್ರೀ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಶುಭಾ ಕಾರ್ಯಕ್ರಮ ನಿರೂಪಿಸಿದರು. ಮಾನಸ ಪ್ರಾರ್ಥನೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net