ಮೈಸೂರಿನಲ್ಲಿ ‘ಕೊಳಲು ಅಳಲು’ ಕೃತಿ ಬಿಡುಗಡೆ

book release
Published on

ಮೈಸೂರು: ಪ್ರೊ.ಕೆ. ವೆಂಕಟಗಿರಿಗೌಡ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಷತ್ ಹಾಗೂ ಹನ್ಯಾಳು ಪ್ರಕಾಶನ ವತಿಯಿಂದ ನಗರದ ಸರಸ್ವತಿಪುರಂನ ರೋಟರಿ ಪಶ್ಚಿಮ ಸಭಾಂಗಣದಲ್ಲಿ ಭಾನುವಾರ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಜೆ.ರಾಮಲಿಂಗೇಗೌಡ ರಚನೆಯ ‘ಕೊಳಲು ಅಳಲು’ ಮತ್ತು ‘ಚುಟುಕು-ಚುರುಕು’ ಕೃತಿಗಳ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು.

ಹಾವೇರಿಯ ಜಾನಪದ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಮಾತನಾಡಿ, ಸಮಾಜದ ಪ್ರಚಲಿತ ಸಮಸ್ಯೆಗಳು, ಪ್ರೀತಿ, ಪ್ರೇಮ, ಸಂಸಾರ ಸೇರಿದಂತೆ ಹಲವು ವಿಚಾರಗಳ ಕುರಿತು ಜೆ.ರಾಮಲಿಂಗೇಗೌಡರು ಕಾವ್ಯ ರಚಿಸಿದ್ದಾರೆ. ರಾಮಲಿಂಗೇಗೌಡ ರಚನೆಯ ಕೃತಿಗಳು ಸಮಾಜದ ಅಂಕು-ಡೋಕು, ಏರು-ಪೇರುಗಳಿಗೆ ಕೈಗನ್ನಡಿಯಂತಿವೆ ಎಂದು ಹೇಳಿದರು.

ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ.ಪ್ರೀತಿ ಶುಭಚಂದ್ರ ಮಾತನಾಡಿ, ಕೋಮುವಾದ, ಭ್ರಷ್ಟರಾಜಕಾರಣ ವ್ಯವಸ್ಥೆಯಲ್ಲಿ ರಾಮಲಿಂಗೇಗೌಡ ಅವರಿಗೆ ಬರವಣಿಗೆಯೇ ಪ್ರತಿಭಟನೆಯ ಸಾಧನವಾಗಿದೆ. ರಾಮಲಿಂಗೇಗೌಡ ಅವರು ಕಾವ್ಯದ ಮೂಲಕ ಭ್ರಷ್ಟ ರಾಜಕಾರಣ ಕಟುವಾಗಿ ಟೀಕಿಸಿದ್ದಾರೆ. ಅಧಿಕಾರಶಕ್ತಿಯ ತೂಗುಗತ್ತಿಗೆ ಕೊರಳೊಡ್ಡುವ ನಿರ್ಭೀತಿ ಇದ್ದರೆ ಮಾತ್ರ ಇಂತಹ ಉತ್ತಮ ಕಾವ್ಯ ರಚಿಸಲು ಸಾಧ್ಯ. ಇವರ ಕಾವ್ಯವು ಸಿನಿಕತನಕ್ಕೆ ನಮ್ಮನ್ನು ದೂಡದೆ ವಾಸ್ತವತೆಯನ್ನು ತೆರೆದಿಡುತ್ತದೆ ಎಂದು ಹೇಳಿದರು.

ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ.ಜಿ. ಚಂದ್ರಶೇಖರ್, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಹೆಚ್ಚುವರಿ ಆಯುಕ್ತ ಜೆ.ರಾಮಲಿಂಗೇಗೌಡ, ಪರಿಷತ್ ಕಾರ್ಯದರ್ಶಿ ಎನ್.ಸಿ. ತಮ್ಮಣ್ಣಗೌಡ, ಪ್ರಕಾಶಕ ಎಚ್.ಎಸ್. ಗೋವಿಂದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net