ಡಾ. ಪುರುಷೋತ್ತಮ ಅವರ 2 ಕೃತಿಗಳು ಬಿಡುಗಡೆ

book release
Published on

ಮೈಸೂರು: ನಗರದ ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಿಶುವಿಹಾರ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡ ಸಮಾರಂಭದಲ್ಲಿ ಸಂಸ್ಕೃತಿ ಪ್ರಕಾಶನ ಹೊರ ತಂದಿರುವ ಡಾ. ಪುರುಷೋತ್ತಮ ಆರ್. ತಿಮ್ಮಪ್ಪ ರಚನೆಯ ‘ಚಿಟಿಗಾನಪುರಿ ಚಾರಣ’ ಹಾಗೂ ‘ರಾಮನ ಆಧ್ಯಾತ್ಮಿಕ ಸಾಧನೆಯ ಬೆಳಕು ನೆರಳುಗಳು’ ಕೃತಿಗಳು ಬಿಡುಗಡೆಗೊಂಡಿತು.

ಲೇಖಕ ಲೇಖಕ ಪಿ.ಎಸ್ ಲಕ್ಷ್ಮೀನಾರಾಯಣ ರಾವ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲೂ ಬಾಲ್ಯಾವಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಡಾ. ಪುರುಷೋತ್ತಮ ಆರ್. ತಿಮ್ಮಪ್ಪ ಅವರು ‘ಚಿಟಿಗಾನಪುರಿ ಚಾರಣ’ ಕೃತಿಯಲ್ಲಿ ತಮ್ಮ ಬಾಲ್ಯದ ದಿನಗಳ ಕುರಿತು ಹೆಚ್ಚಾಗಿ ಬರೆದಿದ್ದಾರೆ. ಈ ಕೃತಿ ಅವರ ಬಾಲ್ಯದ ಜೀವನ ಹಾಗೂ ಅವರ ಗ್ರಾಮದ ಜನಜೀವನವನ್ನು ತೆರೆದಿಡುತ್ತದೆ ಎಂದರು.

ಪ್ರಕಾಶಕ ಸಂಸ್ಕೃತಿ ಸುಬ್ರಹ್ಮಣ್ಯ, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಟಿ.ಕೆ. ಸುಂದರಲಕ್ಷ್ಮಿ, ಪ್ರಾಧ್ಯಾಪಕರಾದ ಡಾ.ಜಯಶಂಕರ ಕಂಗಣ್ಣಾರು, ಡಾ.ಪಿ.ಆರ್. ಹರಿನಾಥ್, ಲೇಖಕರಾದ ಲೇಖಕ ಪಿ.ಎಸ್ ಲಕ್ಷ್ಮೀನಾರಾಯಣ ರಾವ್, ಲೇಖಕ ಡಾ. ಪುರುಷೋತ್ತಮ ಆರ್. ತಿಮ್ಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net