ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ

22222222
Published on

ಹಾರುಗೇರಿ: ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಟ್ರಸ್ಟ್‌ನ ಲಿಟಲ್ ಹಾರ್ಟ್ ಆಂಗ್ಲ್ ಮಾಧ್ಯಮ ಶಾಲೆ ಹಾಗೂ ಬಿ.ಆರ್.ಆಜೂರ ಪ್ರೌಢಶಾಲೆ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಶುಕ್ರವಾರ 201-20ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಯುವಜನತೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಸಮಯ ಹಾಳು ಮಾಡುವ ಬದಲು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಪ್ರಾಚಾರ್ಯ ಬಿ.ಆರ್.ಆಜೂರ ಸಲಹೆ ನೀಡಿದರು. ಶಾಲಾ ಸಿಬ್ಬಂದಿಗಳಾದ ಪವನಕುಮಾರ ಪತ್ತಾರ, ಪ್ರಜ್ಞಾ ಐತವಾಡೆ, ಕೆ.ಪಿ.ಬಾಲೋಜಿ, ಸತೀಶ ಮಾಂಗ, ಸವಿತಾ ದರೂರ, ಶ್ರೀಧರ ಅಜೂರ ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net