

ಅನುಭವದ ಅರಿವು ಪುಸ್ತಕ ಬಿಡುಗಡೆ ಕಾರ್ಯಕ್ರಮ ಫೆ.15ರಂದು ಸಂಜೆ 5.30ಕ್ಕೆ ನಗರದ ಲಿಂಗಾಂಬುಧಿಪಾಳ್ಯದಲ್ಲಿರುವ ಅರಿವು ಶಾಲೆಯಲ್ಲಿ ಆಯೋಜಿಸಲಾಗಿದೆ.
ಹೋಮಿಯೋಪಥಿ ವೈದ್ಯರೂ ಆಗಿರುವ ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಎಂ.ಸಿ. ಮನೋಹರ ಅವರು ಹಲವಾರು ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಶಾಲೆ, ವಿದ್ಯಾರ್ಥಿಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಬರೆದಿದ್ದ ಲೇಖನಗಳ ಸಂಗ್ರಹ ಪುಸ್ತಕ ಇದಾಗಿದೆ.
ನಿವೃತ್ತ ಪ್ರಾಧ್ಯಾಪಕ ಹಾಗೂ ಹಿರಿಯ ಜಾನಪದ ವಿದ್ವಾಂಸ ಡಾ. ಕೃಷ್ಣಮೂರ್ತಿ ಹನೂರು, ಆಂದೋಲನ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ರಶ್ಮಿ ಕೋಟಿ, ಸಂವಹನ ಪ್ರಕಾಶನ ಸಂಸ್ಥೆಯಡಿ.ಎನ್.ಲೋಕಪ್ಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.