ಅ.5ರಂದು ರಂಗಕಲಾವಿದರಿಗೆ ಸನ್ಮಾನ, ಪುಸ್ತಕ ಬಿಡುಗಡೆ: ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ವಿವರ

Book launch press conference Mandya
Published on

ಮಂಡ್ಯ: ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಅ.5ರಂದು ಬಹುಮುಖ ಪ್ರತಿಭೆ ಕೆ.ಪಿ.ಸ್ವಾಮಿ ಅವರ ಪೌರಾಣಿಕ ನಾಟಕ ಸಂಪುಟ ‘ರಂಗಕುಸುಮ’ ಪುಸ್ತಕ ಬಿಡುಗಡೆ ಹಾಗೂ ರಂಗಕಲಾವಿದರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಕಾರ್ಯದರ್ಶಿ ಲೋಕೇಶ್ ಚಂದಗಾಲು ಹೇಳಿದರು.

ಅಂದು ಬೆಳಗ್ಗೆ 11ಗಂಟೆಗೆ ಮಾಜಿ ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪುಸ್ತಕ ಬಿಡುಗಡೆ ಮಾಡುವರು. ಸಾಹಿತಿ ಡಾ.ಸಿ.ನಾಗಣ್ಣ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ರಂಗಭೂಮಿ ಕಲಾವಿದರಾದ ಲಕ್ಷ್ಮಯ್ಯ, ಬಿ.ವೆಂಕಟ್, ಡಾ.ಪ್ರೇಮ್‌ಕುಮಾರ್, ಸಿ.ದೊಡ್ಡಣ್ಣಾಚಾರ್, ಅಪ್ಪಾಜಿಗೌಡ, ಲೈಟಿಂಗ್ ಡೆಕೋರೇಟರ್ ಅಶೋಕಕುಮಾರ್, ಪುಸ್ತಕ ಪ್ರಕಾಶಕ ಆನಂದ ಕೊರಟಿ ಅವರನ್ನು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಜಿ.ಪಿ.ಒ.ಚಂದ್ರು ಸನ್ಮಾನಿಸುವರು. ಪುಸ್ತಕದ ಕರ್ತೃ ಕೆ.ಪಿ.ಸ್ವಾಮಿ ಉಪಸ್ಥಿತರಿರುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

7ರಂದು ಪ್ರಶಸ್ತಿ ಪ್ರದಾನ: ಅ.7ರಂದು ಬೆಳಗ್ಗೆ 11 ಗಂಟೆಗೆ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಸಿ.ಗೌರಮ್ಮ ಚಿಕ್ಕಣ್ಣ ಸಮಾಜಸೇವಾ ಪ್ರಶಸ್ತಿ, ಸಿ.ಸುವರ್ಣ ಎಂ.ಪುಟ್ಟಸ್ವಾಮಿ ಶೈಕ್ಷಣಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಿರಿಯ ವಕೀಲ ಬಿ.ಅಪ್ಪಾಜಿಗೌಡ ಅಧ್ಯಕ್ಷತೆಯಲ್ಲಿ ಪರಿಸರ ಪ್ರೇಮಿ ಬಿ.ಎಲ್.ಶಂಕರಪ್ಪ ಅವರಿಗೆ ಸಮಾಜ ಸೇವಾ ಪ್ರಶಸ್ತಿ, ಶಿಕ್ಷಣ ತಜ್ಞ, ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರಗೌಡ ಅವರಿಗೆ ಶೈಕ್ಷಣಿಕ ಪ್ರಶಸ್ತಿಯನ್ನು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು ಪ್ರದಾನ ಮಾಡುವರು ಎಂದು ತಿಳಿಸಿದರು.

ಸರ್ಕಾರಿ ಸ್ವಾಯತ್ತ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎಸ್.ಶಿವರಾಮು ಅಭಿನಂದನಾ ನುಡಿಗಳನ್ನಾಡಲಿದ್ದು, ಪ್ರಶಸ್ತಿ ಪ್ರಾಯೋಜಕರಾದ ಚಿಕ್ಕಣ್ಣ, ವೈಸಿ.ಚನ್ನಪ್ಪ ಉಪಸ್ಥಿತರಿರಲಿದ್ದಾರೆ. ಸಮಾಜ ಸೇವಾ ಪ್ರಶಸ್ತಿಗೆ 25 ಸಾವಿರ ರೂ ನಗದು ಹಾಗೂ ಶೈಕ್ಷಣಿಕ ಪ್ರಶಸ್ತಿಗೆ 21 ಸಾವಿರ ನಗದಿನೊಂದಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ವಿವರಿಸಿದರು.

ಸಂಘದ ನಿರ್ದೇಶಕ ಎಚ್.ಕೆ.ನಾಗಪ್ಪ, ಸದಸ್ಯ ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net