ಪುಸ್ತಕ ಬಿಡುಗಡೆ ಪೂರ್ವಭಾವಿಸಭೆ

New Bjp New
Published on

ಹುಬ್ಬಳ್ಳಿ : ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರದಂದು ‘ಸಂವಿಧಾನ ಬದಲಿಸಿದ್ದು ಯಾರು ?’ ಪುಸ್ತಕ ಬಿಡುಗಡೆಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಭಾರತೀಯ ಸಂವಿಧಾನ ರಚಿಸಿದ್ದು ಮಹಾನ್ ವ್ಯಕ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಅವರು. ಆದರೆ, ಇಂತಹ ಮಹನೀಯರು ನಿಧನರಾದಾಗ ಅಂದಿನ ಕಾಂಗ್ರೆಸ್ ಸರ್ಕಾರ ಅವರ ಅಂತ್ಯಕ್ರಿಯೆಗೆ ಜಾಗ ನೀಡದೇ ನಿರಾಕರಿಸಿತು ಎಂದು ದೂರಿದರು.

ಡಾ. ಅಂಬೇಡ್ಕರ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದ್ದು ಬಿಜೆಪಿ. ಡಾ. ಅಂಬೇಡ್ಕರ ಅವರ ತತ್ವ, ಸಿದ್ಧಾಂತಗಳನ್ನು ಪಾಲಿಸುತ್ತಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದರು.

ಪರಿಶಿಷ್ಟ ಜಾತಿ ಹಾಗೂ ಪಂಗಡ ಸಮಾಜದವರನ್ನು ಕಾಂಗ್ರೆಸ್ ಮತಬ್ಯಾಂಕ್​ಗಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜ. 11ರಂದು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಆಯೋಜಿಸಿರುವ ಪುಸ್ತಕ ಲೋಕಾರ್ಪಣೆಯಲ್ಲಿ ಪ್ರತಿ ವಾರ್ಡ್​ಗಳಿಂದ ಜನರು ಪಾಲ್ಗೊಳ್ಳುವಂತೆ ಕೋರಿದರು.

ಬಿಜೆಪಿ ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಮಹೇಂದ್ರ ಕೌತಾಳ, ಸತೀಶ ಶೇಜವಾಡಕರ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ಸಂತೋಷ ಅರಕೇರಿ, ಪರಶುರಾಮ ಪೂಜಾರ, ನಾಗರಾಜ ಟಗರಗುಂಟಿ, ರಾಧಾಬಾಯಿ ಸಫಾರೆ, ಎಂ.ವೈ ನರಗುಂದ, ಮಲ್ಲಿಕಾರ್ಜುನ ಗುಂಡೂರ, ಬೀರಪ್ಪ ಖಂಡೇಕಾರ, ಉಮಾ ಮುಕುಂದ, ರವಿ ನಾಯಕ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net