ಉಡುಪಿ ಜಿಲ್ಲೆಯಲ್ಲಿ ಉದಯಿಸಲಿ ಕೊಂಕಣಿ ಸಾಹಿತಿಗಳು...

Book
Published on

ಡಾ.ಜೆರಾಲ್ಡ್​ ಐಸಾಕ್​ ಲೋಬೊ ಆಶಯ

ಮೋಗ್​ ಆನಿಂ ಬಲಿದಾನ್​ ಪುಸ್ತಕ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಉಡುಪಿಯಲ್ಲಿ ಕೊಂಕಣಿ ಭಾಷೆಗೆ ವಿಶೇಷ ಪ್ರೋತ್ಸಾಹವಿದೆ. ಈ ಭಾಷೆಯ ಕುರಿತು ಎಲ್ಲರಲ್ಲೂ ಪ್ರೀತಿಯಿದ್ದು ಸಮಾಜದಲ್ಲಿ ಹೆಚ್ಚು ಯುವ ಕೊಂಕಣಿ ಸಾಹಿತಿಗಳು ಉದಯಿಸಬೇಕಾಗಿದೆ. ಅದರಿಂದ ಕೊಂಕಣಿ ಭಾಷೆಯ ಬೆಳವಣಿಗೆ ಹಾಗೂ ಮುನ್ನೆಲೆಗೆ ಪೂರಕವಾಗಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧಮಾರ್ಧ್ಯಕ್ಷ ಡಾ.ಜೆರಾಲ್ಡ್​ ಐಸಾಕ್​ ಲೋಬೊ ಅಭಿಪ್ರಾಯಪಟ್ಟರು.

ಉಡುಪಿಯ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಮತ್ತು ಬೆಳ್ಳೆ ವಿಶನ್​ ಡಾಟ್​ ಕಾಮ್​ ಆಶ್ರಯದಲ್ಲಿ ಜುಲೈ 22ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ. ಎವ್ಜಿನ್​ ಡಿಸೋಜಾ ಮೂಡುಬೆಳ್ಳೆ ಅವರ ಮೋಗ್​ ಆನಿಂ ಬಲಿದಾನ್​ (ಪ್ರೀತಿ ಮತ್ತು ಬಲಿದಾನ) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಮಾತೃಭಾಷೆ ಮರೆಯದಿರಿ

ವಿಶನ್​ ಕೊಂಕಣಿ ಸ್ಥಾಪಕ ಮೈಕಲ್​ ಡಿಸೋಜಾ ಮಾತನಾಡಿ, ಎಂದಿಗೂ ನಾವು ಹೆತ್ತ ತಾಯಿ, ಹುಟ್ಟಿದ ಊರು ಮತ್ತು ಮಾತೃ ಭಾಷೆ ಮರೆಯಬಾರದು. ಎಲ್ಲರೂ ಮನೆಯಲ್ಲಿ ಮಕ್ಕಳಿಗೆ ಕೊಂಕಣಿ ಭಾಷೆ ಓದಲು ಉತ್ತೇಜಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ನಿರಂತರ್​ ಕೊಂಕಣಿ ಸಂಘಟನೆ ಉದ್ಯಾವರ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಚಲನಚಿತ್ರ ಪ್ರದರ್ಶನದ ಪೋಸ್ಟರ್​ಅನ್ನು ಧಮಾರ್ಧ್ಯಕ್ಷರು ಬಿಡುಗಡೆ ಮಾಡಿದರು. ಬೆಳ್ಳೆ ವಿಶನ್​ ಡಾಟ್​ ಕಾಮ್​ ಪ್ರವರ್ತಕ ಎಲಿಯಾಸ್​ ಡಿಸೋಜಾ ಉಪಸ್ಥಿತರಿದ್ದರು.

ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಸಂಚಾಲಕ ವಂ.ಡೆನಿಸ್​ ಡೆಸಾ ಸ್ವಾಗತಿಸಿದರು. ಕಿಟಾಳ್​ ಅಂತರ್ಜಾಲ ಮಾಧ್ಯಮದ ಸಂಪಾದಕ ಎಚ್​.ಎಂ. ಪೆರ್ನಾಲ್​ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರ ಡಾ.ಎವ್ಜಿನ್​ ಡಿಸೋಜಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net