ಅಂಕಣ ಬರಹಗಳ ಪುಸ್ತಕ ಬಿಡುಗಡೆ

Published on

ಮಂಗಳೂರು: ಬಳ್ಕೂರು ಯಕ್ಷ ಕುಸುಮ ಚಾರಿಟೆಬಲ್ ಟ್ರಸ್ಟ್ ಮಂಗಳೂರು ಆಶ್ರಯದಲ್ಲಿ ಚಿಕ್ಕಮಗಳೂರು ವಿಭಾಗದ ಅಂಚೆ ಈಕ್ಷಕ ಶ್ರೀನಾಥ್ ಬಸ್ರೂರು ಅವರ ‘ಒಮ್ಮೊಮ್ಮೆ ಅನಿಸಿದ್ದು’ ಅಂಕಣ ಬರಹಗಳ ಪುಸ್ತಕವನ್ನು ಗುರುವಾರ ಪುಟ್ಟಣ ಕುಲಾಲ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಉತ್ತಮ ಪುಸ್ತಕಗಳು ಇನ್ನಷ್ಟು ಹೊರಬಬೇಕು. ಪುಸ್ತಕ ಓದುವವರ ಸಂಖ್ಯೆಯೂ ಹೆಚ್ಚಾಗಬೇಕು. ಈ ಅಂಕಣ ಬರಹದಲ್ಲಿ ಹಲವು ವಿಚಾರಗಳಿಗೆ ತನ್ನೊಳಗಿನ ಚಿಂತನೆಯನ್ನು ಸೇರಿಸಿ ಒದುಗರಿಗೆ ಉಣ ಬಡಿಸುವ ಪ್ರಯತ್ನ ಕೃತಿಯಲ್ಲಿ ಲೇಖಕರು ಮಾಡಿದ್ದಾರೆ ಎಂದರು.

ಲೇಖಕ ಶ್ರೀನಾಥ್ ಬಸ್ರೂರು ಅವರು ಮಾತನಾಡಿ, ಮುಂಜಾವಿನ ನಡಿಗೆತ ಸಮಯದಲ್ಲಿ ಒಮ್ಮೊಮ್ಮೆ ಅನಿಸಿದ, ಹಲವೊಮ್ಮೆ ನೆನಪಾದ, ಕೆಲವು ವಿಷಯಗಳನ್ನು ಬರೆದು ಪುಸ್ತಕರೂಪದಲ್ಲಿ ಇಟ್ಟಿದ್ದೇನೆ. ಇದು ಮೊದಲ ಪ್ರಯತ್ನವಾಗಿದೆ ಎಂದರು.

ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಅಂಚೆ ಚೀಟಿ ಸಂಗ್ರಾಹಕಿ ವಿದ್ಯಾ ಕಿಶೋರಿ ಬಾಗಲೋಡಿ, ಟ್ರಸ್ಟ್ ಅಧ್ಯಕ್ಷ ಕರುಣಾಕರ ಬಳ್ಕೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net