

ಕಡಬ: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ತತೀಯ ಬಿ.ಎ ವಿದ್ಯಾರ್ಥಿಗಳು ಬರೆದ ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ಮತ್ತು ಪುದಬೆಟ್ಟು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಜೈನಮಂದಿರದ ವಿಚಾರಗಳ ಸಂಗ್ರಹ ಕೃತಿ ‘ಮೆಲುಕು’ಪುಸ್ತಕದ ಬಿಡುಗಡೆ ಕಾರ್ಯಕ್ರಮ ಗುರುವಾರ ನೆರವೇರಿತು.
ವಿದ್ಯಾರಶ್ಮಿ ಸಂಸ್ಥೆ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಪುಸ್ತಕ ಬಿಡುಗಡೆಗೊಳಿಸಿದರು. ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀವತ್ಸ ಮೋರಾಜೆ ಬಳ್ಪ ದೇವಸ್ಥಾನದ ಸ್ಥಳ ಚರಿತ್ರೆ ಮಾಹಿತಿ ನೀಡಿದರು.
ಸವಣೂರು ಪುದುಬೆಟ್ಟು ಚಂದ್ರನಾಥ ಬಸದಿಯ ಅಧ್ಯಕ್ಷ ಬಿ.ಶತ್ರುಂಜಯ ಆರಿಗ ಬೆಳಂದೂರು ಬಸದಿಯ ಇತಿಹಾಸ ವಿವರಿಸಿದರು. ಸಂಸ್ಥೆ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ರಾಜಲಕ್ಷ್ಮೀ ಎಸ್.ರೈ ಮತ್ತು ಉಪಪ್ರಾಂಶುಪಾಲ ಶೇಷಗಿರಿ ಎಂ.ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರತಿಭಾ ಎಸ್.ಕಾರ್ಯಕ್ರಮ ನಿರೂಪಿಸಿದರು.