

ಬೆಂಗಳೂರು: ಗ್ರಾಹಕರಿಗೆ ಡಿಜಿಟಲ್ ಸೇವೆ ಒದಗಿಸುವ ನಿಟ್ಟಿನಲ್ಲಿ "ವಿಶ್ವಾಸ್ ವರ್ಲ್ಡ್ ಟೆಕ್' . ಪ್ರೈ ಲಿ. ನೂತನವಾಗಿ ಅಭಿವೃದ್ಧಿಪಡಿಸಿರುವ "ವಿಶ್ವಾಸ್ ಪೇ' ಆ್ಯಪ್ ಶನಿವಾರ ಅನಾವರಣಗೊಂಡಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿದ್ದ ಕಾರ್ಯಕ್ರಮದಲ್ಲಿ ನಟ ಪ್ರೇಮ್, ಅವಧೂತ ಶ್ರೀ ವಿನಯ್ ಗುರೂಜಿ "ವಿಶ್ವಾಸ್ ಪೇ' ಆ್ಯಪ್ ಹಾಗೂ "ವಿಶ್ವಾಸ್ ವರ್ಲ್ಡ್ ಮಾರ್ಟ್ ವೆಬ್ಸೈಟ್ಗೆ ಚಾಲನೆ ನೀಡಿದರು. ನಟಿ ರಂಜನಿ ರಾಘವನ್, ಮಾಜಿ ಶಾಸಕ ಅಶ್ವತ್ಥ್,ರೋಟರಿ ಕ್ಲಬ್ನ ಮಾಜಿ ರಾಜ್ಯಪಾಲ ನಾಗೇಂದ್ರ ಪ್ರಸಾದ್, ಶಿಕ್ಷಣ ತಜ್ಱ ಡಾ. ಸೆಲ್ವರಾಜ್ ನಾರಾಯಣ್ ಮತ್ತಿರರರು ಭಾಗಿಯಾಗಿದ್ದರು.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಮನೆಗೆ ಬೇಕಾದ ಗೃಹೋಪಯೋಗಿ ವಸ್ತುಗಳು, ದಿನಸಿ ಪದಾರ್ಥಗಳನ್ನು ಬುಕಿಂಗ್ ಮಾಡಬಹುದು. ಮನೆ ಬಾಗಿಲಿಗೆ ಕಂಪನಿ ಉಚಿತವಾಗಿ ಸರಬರಾಜು ಮಾಡಲಿದೆ. ಮೊಬೈಲ್, ಟಿವಿ ರೀಚಾರ್ಜ್, ವಿದ್ಯುತ್, ಗ್ಯಾಸ್, ತೆರಿಗೆ ಸೇರಿ ಇತರೆ ಬಿಲ್ಗಳಿಗೂ ಹಣ ಪಾವತಿಸಬಹುದು. ಪ್ರವಾಸ ಬುಕಿಂಗ್ ಮಾಡಿಕೊಳ್ಳುವ ಅವಕಾಶವೂ ಇದೆ. ಉದ್ಘಾಟನಾ ನಿಮಿತ್ತ ರೀಚಾರ್ಜ್ ಮಾಡಿದರೆ ಆಕರ್ಷಕ ಕೊಡುಗೆ ದೊರೆಯಲಿವೆ. ಒಂದೇ ಸೂರಿನಡಿ ಎಲ್ಲ ಸೇವೆಗಳು ಗ್ರಾಹಕರಿಗೆ ಲಭ್ಯವಿದೆ.
ವೆಬ್ಸೈಟ್ನಲ್ಲಿ ಭೇಟಿ ನೀಡಿದರೆ ಯಾವುದೇ ಲಾಗಿನ್ ಇಲ್ಲದೆ ಗೃಹೋಪಯೋಗಿ, ಟಿವಿ, ವಾಷಿಂಗ್ ಮಷಿನ್, ಮೊಬೈಲ್, ಸೌಂದರ್ಯ ಉತ್ಪನ್ನ, ಎಲೆಕ್ಟ್ರಾನಿಕ್ಸ್ ವಸ್ತುಗಳು, ಬಟ್ಟೆ, ದಿನಸಿ ಸೇರಿ ದಿನ ಬಳಕೆ ವಸ್ತುಗಳನ್ನು ವೀಕ್ಷಿಸಿ ಬುಕಿಂಗ್ ಮಾಡಬಹುದು. ಯಾವ್ಯಾವ ವಸ್ತುಗಳಿಗೆ ಆಫರ್ ಇದೆ ಎಂಬ ಬಗ್ಗೆ ಮಾಹಿತಿಯೂ ಸಿಗುತ್ತದೆ. ಬುಕಿಂಗ್ ಮಾಡಿರುವ ಉತ್ಪನ್ನದ ಟ್ರ್ಯಾಕಿಂಗ್ ಮಾಡಬಹುದು. ಎಕ್ಸ್ಚೇಂಜ್ ಅವಕಾಶವೂ ಇದೆ.
ಗ್ರಾಮೀಣ ಪ್ರದೇಶದಿಂದ ಬಂದಿರುವ ನಾನು ಏನಾದರೂ ಹೊಸದನ್ನೂ ಸಾಧಿಸಬೇಕೆಂಬ ಆಶಯದೊಂದಿಗೆ "ವಿಶ್ವಾಸ್ ಪೇ', ವಿಶ್ವಾಸ್ ವರ್ಲ್ಡ್ ಮಾರ್ಟ್' ಎಂಬ ವಿನೂತನ ಗ್ರಾಹಕಸ್ನೇಹಿ ಡಿಜಿಟಲ್ ವೇದಿಕೆ ಆರಂಭಿಸಿದ್ದೇವೆ. ಡಿಜಿಟಲ್ ಯುಗದಲ್ಲಿ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ. ಕುಳಿತಿರುವ ಸ್ಥಳದಲ್ಲಿ ಕೈಗೆಟುಕುವ ದರದಲ್ಲಿ ಉತ್ಪನ್ನಗಳನ್ನು ಬುಕಿಂಗ್ ಮಾಡಬಹುದು. ವಿದ್ಯುತ್, ನೀರು ಸೇರಿ ವಿವಿಧ ಬಿಲ್ಗಳಿಗೂ ಹಣ ಪಾವತಿಸಬಹುದು.
| ಎನ್.ವಿಶ್ವ. ಎಂಡಿ, ವಿಶ್ವಾಸ್ ವರ್ಲ್ಡ್ ಟೆಕ್ ಪ್ರೈ.ಲಿ.