ವ್ಯಾಸಂಗಕ್ಕೆ ನೀಡುವ ಕೊಡುಗೆಯಿಂದ ಪರಮಾನಂದ: ಸಂತೋಷ್ ಕುಲ್ಕುಂದ ಹೇಳಿಕೆ

New Project (2)
Published on

ಸುಬ್ರಹ್ಮಣ್ಯ: ಗ್ರಾಮೀಣ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕೈಲಾದ ಸಹಕಾರ ನೀಡುವುದರಿಂದ ಮನಸ್ಸಿಗೆ ಪರಮಾನಂದ ಉಂಟಾಗಿದೆ. ಕುಕ್ಕೆಶ್ರೀ ಅಟೋ ಚಾಲಕ ಸಂಘದಿಂದ ಈ ಶಾಲೆಗೆ ಪ್ರತಿ ವರ್ಷ ಸಹಕಾರ ನೀಡುತ್ತಾ ಬರುತ್ತಿದ್ದೇವೆ ಎಂದು ಕುಕ್ಕೆಶ್ರೀ ಆಟೋ ಚಾಲಕ ಮಾಲೀಕರ ಸಂಘ ಅಧ್ಯಕ್ಷ ಸಂತೋಷ್ ಕುಲ್ಕುಂದ ಹೇಳಿದರು.

ಸುಬ್ರಹ್ಮಣ್ಯದ ಕುಕ್ಕೆಶ್ರೀ ಅಟೋ ಚಾಲಕ ಮಾಲೀಕರ ಸಂಘದಿಂದ ದೇವರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ಉಚಿತ ಪುಸ್ತಕ, ಲೇಖನಿ ಸಾಮಗ್ರಿ ವಿತರಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷೆ ಮಮತಾ ಮಾಣಿಬೈಲು, ಶಾಲಾ ಮುಖ್ಯಗುರು ವಾಣಿ ದಿನೇಶ್, ಶಿಕ್ಷಕಿ ವಿನುತಾ ಉಪ್ಪಳಿಕೆ, ಕುಕ್ಕೆಶ್ರೀ ಆಟೋ ಚಾಲಕ ಸಂಘದ ಪೂರ್ವಾಧ್ಯಕ್ಷ ಪ್ರವೀಣ್ ಶೆಟ್ಟಿ, ಪದಾಧಿಕಾರಿಗಳಾದ ಯಶೋಧರ ಕಲ್ಲಾಜೆ, ಶಬರಿ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net