

ಮದ್ದೂರು: ತಾಲೂಕಿನ ವಳೆಗರಹಳ್ಳಿಯ ಶ್ರೀ ಗುರುದತ್ತ ಆಶ್ರಮದ ಮಕ್ಕಳಿಗೆ ಸಮಾಜ ಸುಧಾರಕರಾದ ಬುದ್ಧ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಹಾಗೂ ಇನ್ನಿತರ ಮಹನೀಯರ ಪುಸ್ತಕವನ್ನು ಭಾರತದ ಸಂವಿಧಾನ ರಕ್ಷಣಾ ಸಮಿತಿ ವತಿಯಿಂದ ಸೋಮವಾರ ವಿತರಣೆ ಮಾಡಲಾಯಿತು.
ಪ್ರಗತಿಪರ ಸಂಘಟಕ ಕೆ.ಟಿ.ಶಿವಕುಮಾರ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಪುಸ್ತಕ ಓದುವ ಹವ್ಯಾಸ ರೂಢಿಸಿಬೇಕು ಎಂಬ ಉದ್ದೇಶದಿಂದ ಮಹನೀರ ಪುಸ್ತಕಗಳನ್ನು ಉಚಿತವಾಗಿ ನೀಡುವ ಮೂಲಕ ಪ್ರೇರಣೆ ತುಂಬುತ್ತಿದ್ದೇವೆ. ಮೊಬೈಲ್ ಗೀಳಿಗೆ ಅಂಟಿಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ತಲೆ ಬಗ್ಗಿಸಿ ಪುಸ್ತಕ ಓದಿ, ನಿಮ್ಮನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ ಎಂಬ ನಾನ್ನುಡಿಯಂತೆ ಎಲ್ಲರೂ ಪುಸ್ತಕ ಓದುವತ್ತಾ ಗಮನಹರಿಸಬೇಕು ಎಂದು ತಿಳಿಸಿದರು.
ಮುಖಂಡರಾದ ಚಾಮನಹಳ್ಳಿ ರಾಚಯ್ಯ, ಸಿದ್ದೇಗೌಡ, ಮಹಾದೇವ, ಅಹಿಂದ ಸಂರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪಿ.ಶಶಿಕುಮಾರ್, ಆಶ್ರಮದ ವ್ಯವಸ್ಥಾಪಕಿ ಸುಷ್ಮಾ ಇದ್ದರು.