ರಾಜ ಕೇಸರಿ ಟ್ರಸ್ಟ್‌ನಿಂದ ಪುಸ್ತಕ ವಿತರಣೆ

New Project (7)
Published on

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ವತಿಯಿಂದ ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ನೇತೃತ್ವದಲ್ಲಿ 563 ಸೇವಾ ಯೋಜನೆ ಅಂಗವಾಗಿ ನೀರಚಿಲುಮೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನಾವರ ಪಿಲ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಹೊಸಪಟ್ಟ ಬಜಿರೆ ವೇಣೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಬ್ಯಾಗ್ ಹಾಗೂ ಪುಸ್ತಕ ವಿತರಣೆ ನಡೆಯಿತು.

ಹೊಸಂಗಡಿ ಪಿಡಿಒ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹೊಸಪಟ್ಟ ಬಜಿರೆ ವೇಣೂರು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ ಪೂಜಾರಿ, ಬಜಿರೆ ವೇಣೂರು ಗ್ರಾಪಂ ಸದಸ್ಯರಾದ ಸುನೀಲ್, ಪ್ರವೀಣ್ ಪೂಜಾರಿ ಜಾರಿಗೆದಡಿ, ತಾಯಂದಿರ ಸಮಿತಿ ಅಧ್ಯಕ್ಷೆ ಸುಮಿತ್ರಾ, ರಾಜ ಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ, ಅಧ್ಯಕ್ಷ ಸತೀಶ್ ಕಂಗಿತ್ತಿಲ್, ಸಂಚಾಲಕ ಜಗದೀಶ್ ಲಾಯಿಲ, ಸಹ ಸಂಚಲಕ ಶರತ್ ಕರಾಯ, ಸಂಘಟನಾ ಕಾರ್ಯದರ್ಶಿ ವಿನೋದ್ ಲಾಯಿಲ, ಸಾಂಸ್ಕೃತಿಕ ಕಾರ್ಯದರ್ಶಿ ದೇವರಾಜ್, ವಿದ್ಯಾರ್ಥಿ ಪ್ರಮುಖ ಸಂದೇಶ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿದ್ಯಾ ಕೆ. ಸ್ವಾಗತಿಸಿದರು. ಸಹ ಶಿಕ್ಷಕಿ ಭವ್ಯಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net